ಪ್ರಜಾಸ್ತ್ರ ಸುದ್ದಿ
ಸದಲಗಾ(Sadalaga): ಕಾಳಸಂತೆಯಲ್ಲಿ ಮಾರಾಟ ಮಾಡಲು ಶೇಖರಿಸಿಟ್ಟಿದ್ದ ಬರೋಬ್ಬರಿ 4 ಟನ್ ಪಡಿತರ ಅಕ್ಕಿಯನ್ನು ಚಿಕ್ಕೋಡಿಯ ಆಹಾರ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪಟ್ಟಣದ ಪ್ರಕಾಶ ನಗರದಲ್ಲಿ ಸುನೀಲ ಬಾಗಡಿ ಎಂಬಾತ ಕಾಳಸಂತೆಗೆ ಸಾಗಿಸಲು ಪಡಿತರ ಅಕ್ಕಿಯನ್ನು ಸಂಗ್ರಹಿಸಿದ್ದ ಎಂದು ಹೇಳಲಾಗುತ್ತಿದೆ.
ಚಿಕ್ಕೋಡಿ ಎಸಿ ಸುಭಾಷ ಸಂಪಗಾವಿ ಹಾಗೂ ತಹಶೀಲ್ದಾರ್ ರಾಜೇಶ ಬುರ್ಲಿ ಅವರ ಮಾರ್ಗದರ್ಶನದಲ್ಲಿ, ಚಿಕ್ಕೋಡಿ ತಾಲೂಕಾ ಆಹಾರ ನಿರೀಕ್ಷಕಿ ಐಶ್ವರ್ಯ ದಿವಟೆ ಮತ್ತು ಆಹಾರ ಶಿರಸ್ತೇದಾರ್ ಹನುಮಂತ ಖಾಂಡೇಕರ್ ಮತ್ತು ಪಿಎಸ್ಐ ಇವರ ನೇತೃತ್ವದಲ್ಲಿ ದಾಳಿ ಮಾಡಿ, 4 ಟನ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




