Ad imageAd image

4 ವರ್ಷಗಳ ಚಹಲ್-ಧನಶ್ರೀ ದಾಂಪತ್ಯ ಅಂತ್ಯ

Nagesh Talawar
4 ವರ್ಷಗಳ ಚಹಲ್-ಧನಶ್ರೀ ದಾಂಪತ್ಯ ಅಂತ್ಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮುಂಬೈ(Mumbai): ಕಳೆದ ಹಲವು ತಿಂಗಳುಗಳಿಂದ ಇಂಡಿಯನ್ ಕ್ರಿಕೆಟ್ ಟೀಂ ಸ್ಟಾರ್ ಬೌಲರ್ ಯಜುವೇಂದ್ರ ಚಹಲ್ ಹಾಗೂ ಧನಶ್ರೀ ದಂಪತಿ ನಡುವೆ ಎಲ್ಲವೂ ಸರಿಯಾಗಿಲ್ಲ. ಅವರಿಬ್ಬರ ನಡುವೆ ಹೊಂದಾಣಿಕೆ ಸಮಸ್ಯೆಯಿದ್ದು, ವಿಚ್ಛೇದನೆ(Divorce)ಪಡೆಯಲಿದ್ದಾರೆ ಎನ್ನಲಾಗುತ್ತಿತ್ತು. ಅದು ಇದೀಗ ನಿಜವಾಗಿದೆ. ಮುಂಬೈನ ಬಾಂದ್ರಾದ ಕೌಟುಂಬಿಕ(Bandra Family Court)ನ್ಯಾಯಾಲಯದಿಂದ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಈ ಮೂಲಕ 4 ವರ್ಷಗಳ ವೈವಾಹಿಕ ಜೀವನ ಅಂತ್ಯವಾಗಿದೆ.

ಫೆಬ್ರವರಿ 20ರಂದು ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಇಬ್ಬರು ನ್ಯಾಯಾಲಯದಲ್ಲಿ ಹಾಜರಾಗಿದ್ದರು. 45 ನಮಿಷಗಳ ಕೌನ್ಸಲಿಂಗ್ ಗೆ ಹಾಜರಾಗುವಂತೆ ಕೋರ್ಟ್ ಸೂಚಿಸಿತ್ತು. ಅದರಲ್ಲಿ ಅವರು ಭಾಗವಹಿಸಿದ್ದರು. ಇಬ್ಬರು ಪರಸ್ಪರ ಒಪ್ಪಿಗೆ ಮೂಲಕ ಬೇರೆಯಾಗುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಎಲ್ಲವನ್ನು ಪರಿಶೀಲನೆ ನಡೆಸಿದ ಕೋರ್ಟ್ ಸಂಜೆ 4.30ರ ಸುಮಾರಿಗೆ ಅಧಿಕೃತವಾಗಿ ವಿಚ್ಛೇದನ ತೀರ್ಪು ಪ್ರಕಟಿಸಿದೆ. ಕೋರ್ಟ್ ಪ್ರಕ್ರಿಯೆ ಬಳಿಕ ಚಹಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹನುಮಂತನ ಫೋಟೋ ಹಾಕಿ ದೇವರು ನನ್ನನ್ನು ಎಷ್ಟೋ ಬಾರಿ ಕಾಪಾಡಿದ್ದಾನೆ ಎಂದಿದ್ದಾರೆ.

WhatsApp Group Join Now
Telegram Group Join Now
Share This Article