ಪ್ರಜಾಸ್ತ್ರ ಸುದ್ದಿ
ಬಳ್ಳಾರಿ(Ballari): ದ್ವಿಚಕ್ರ ವಾಹನಗಳನ್ನು ಸಾಗಿಸುತ್ತಿದ್ದ ಟ್ರಕ್ ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಟ್ರಕ್ ಸೇರಿ 40 ಬೈಕ್ ಗಳು ಸುಟ್ಟು ಕರಕಲಾಗಿವೆ. ಬಳ್ಳಾರಿ ನಗರದ ಬೈಪಾಸ್ ಹತ್ತಿರ ರಸ್ತೆ ಪಕ್ಕಕ್ಕೆ ಟ್ರಕ್ ನಿಲ್ಲಿಸಿ ಚಾಲಕ, ಕ್ಲೀನರ್ ನಿದ್ರೆ ಮಾಡಿದ್ದಾರೆ. ಮುಂಜಾನೆ 5 ಗಂಟೆಯ ಸುಮಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಈ ಬಗ್ಗೆ ಮಾಹಿತಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಟ್ರಕ್ ಹಾಗೂ 40 ಬೈಕ್ ಗಳು ಸುಟ್ಟು ಹೋಗಿವೆ.
ಚೆನ್ನೈನಿಂದ ಬಳ್ಳಾರಿಗೆ ಬೈಕ್ ಗಳನ್ನು ತೆಗೆದುಕೊಂಡು ಟ್ರಕ್ ಹೊರಟಿತ್ತು. ಬಳ್ಳಾರಿ ನಗರದ ಯಮಹಾ ಶೋರೂಂಗೆ 20 ಬೈಕ್ ಹಾಗೂ ವಿಜಯಪುರದ ಶೋರೂಂಗೆ 20 ಬೈಕ್ ಗಳನ್ನು ತೆಗೆದುಕೊಂಡು ಬರಲಾಗುತ್ತಿತ್ತು. ಭಾನುವಾರ ರಾತ್ರಿ ಟ್ರಕ್ ಅನ್ನು ನಿಲ್ಲಿಸಿ ನಿದ್ರೆಗೆ ಜಾರಿದ್ದರು. 60 ಲಕ್ಷ ಮೌಲ್ಯದ ಬೈಕ್ ಗಳು ಸುಟ್ಟು ಹೋಗಿವೆ ಎಂದು ಹೇಳಲಾಗುತ್ತಿದೆ.




