ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಭಾರತದಲ್ಲಿ ಇಂದು ಆನ್ಲೈನ್ ಗೇಮ್ ದೊಡ್ಡ ಚಟವಾಗಿ ಪರಿಣಮಿಸುತ್ತಿದೆ. ಯುವ ಜನತೆ ಇದರ ಬೆನ್ನು ಹಿಂದೆ ಬಿದ್ದು ತಮ್ಮ ದುಡ್ಡಿನ ಜೊತೆಗೆ ಜೀವನ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ವರ್ಷಕ್ಕೆ 45 ಕೋಟಿ ಜನರು ಬರೋಬ್ಬರಿ 20 ಸಾವಿರ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ ಎಂದು ಅಂದಾಜಿಸಿದೆ. ಹಣ ನೀಡಿ ಆನ್ಲೈನ್ ಗೇಮ್ ಆಡುವುದನ್ನು ನಿಷೇಧಿಸುವ ಮಸೂದೆಯನ್ನು ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ.
ಇಂತಹ ಆಟಗಳನ್ನು ಕೌಶಲ್ಯ ಆಧರಿಸಿದ ಆಟವೆಂದು ಬಿಂಬಿಸಿಕೊಳ್ಳುತ್ತಿವೆ. ಆದರೆ, ಅಸಲಿಗೆ ಇದು ಜನರನ್ನು ಜೂಜು, ಬೆಟ್ಟಿಂಗ್ ಕೂಪಕ್ಕೆ ತಳ್ಳುವುದಾಗಿದೆ. ಈ ಮೂಸದೆಯ ವ್ಯಾಪ್ತಿಗೆ ಸಂತ್ರಸ್ತರು ನಿಗದಿಯಾಗುವುದಿಲ್ಲ. ಇದನ್ನು ವೇದಿಕೆ ಮಾಡಿಕೊಂಡವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಆನ್ಲೈನ್ ಗೇಮ್ ನಿಂದ ಯುವ ಜನತೆ ಸೇರಿದಂತೆ ಅದಕ್ಕೆ ದಾಸರಾಗಿರುವವರನ್ನು ಹೊರಗೆ ತರುವುದು ದೊಡ್ಡ ಸವಾಲಾಗಿದೆ.