ಪ್ರಜಾಸ್ತ್ರ ಸುದ್ದಿ
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನ ಮಾಡಿರುವ ಮೊದಲ ಚಿತ್ರ 45 ಟ್ರೇಲರ್ ಸಖತ್ ಸದ್ದು ಮಾಡುತ್ತಿದೆ. ಸಂಚುರಿಸ್ಟಾರ್ ಶಿವಣ್ಣ, ರಿಯಲ್ ಸ್ಟಾರ್ ಉಪೇಂದ್ರ, ರಾಜ್.ಬಿ ಶೆಟ್ಟಿ ತಾರಾಬಳಗದ ಸಿನಿಮಾದ ಟ್ರೇಲರ್ ನೋಡುಗರಿಗೆ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಡಿಸೆಂಬರ್ 25ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳನ್ನು ಥಿಯೇಟರ್ ನತ್ತ ಕರೆದುಕೊಂಡು ಬರುವಂತೆ ಟ್ರೇಲರ್ ಅಬ್ಬರಿಸುತ್ತಿದೆ.
2.10 ನಿಮಿಷದ ಟ್ರೇಲರ್ ಸಿಕ್ಕಾಪಟ್ಟೆ ರಿಚ್ ಆಗಿಯಿದೆ. ಒಂದು ಸಿನಿಮಾದಲ್ಲಿ ಹಲವು ರೀತಿಯ ಕಥೆಗಳನ್ನು ಹೊಂದಿದೆ. ಶಿವರಾಜಕುಮಾರ್, ಉಪೇಂದ್ರ ತುಂಬಾ ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದು, ಈ ಜೋಡಿ ಹಲವು ವರ್ಷಗಳ ಹಿಂದೆ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಈಗ ಮತ್ತೆ ಕಾಣಿಸಿಕೊಂಡಿದೆ. ಆದರೆ, ಎದುರು ಬದುರು ರೀತಿಯಲ್ಲಿರುವುದು ಇನ್ನಷ್ಟು ರೋಚಕವಾಗಿದೆ. ಹೀಗಾಗಿ ಸ್ಟಾರ್ ನಟರ ಅಭಿಮಾನಿಗಳು ಥಿಯೇಟರ್ ನಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದಾರೆ.




