ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಚಿವರು, ಶಾಸಕರು ಸೇರಿ 48 ಜನಪ್ರತನಿಧಿಗಳು ಹನಿ ಟ್ರ್ಯಾಪ್ ಗೆ ಒಳಗಾಗಿದ್ದಾರೆ ಎನ್ನುವ ವಿಚಾರ ರಾಜ್ಯ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಸಚಿವರು, ವಿಪಕ್ಷದ ನಾಯಕರುಗಳು ಸಹ ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಇದಕ್ಕೆ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸುಮ್ಮನೆ ಹನಿ ಟ್ರ್ಯಾಪ್ ಮಾಡುವವರು ನಿಮ್ಮ ಬಳಿ ಬರುತ್ತಾರೆಯೇ? ನೀವು ಹಲೋ ಎಂದರೆ ಅವರು ಹಲೋ ಎನ್ನುತ್ತಾರೆ. ಅವರ ನೋವು ಅವರು ಹೇಳಿಕೊಂಡಿದ್ದಾರೆ. ಮಾಣಿದ್ದುಣ್ಣೋ ಮಹಾರಾಯ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಹನಿ ಟ್ರ್ಯಾಪ್ ಹಿಂದೆ ಡಿ.ಕೆ ಶಿವಕುಮಾರ್ ಟೀಂ ಇಂದೆ ಬಿಜೆಪಿ ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ ವಿಧಾನಸೌಧದಲ್ಲಿ ಅವರು ಏನೆಲ್ಲ ಮಾಡಿದ್ದರು ಅನ್ನೋದು ಪೊಲೀಸ್ ದೂರಿನಲ್ಲಿದೆ. ಆರ್.ಅಶೋಕಗೆ, ಯಡಿಯೂರಪ್ಪಗೆ ಏನಾಯ್ತು ಎಂದು ಬಿಜೆಪಿಯವರೆ ಮಾತನಾಡುತ್ತಿದ್ದರಲ್ಲವೇ? ಅವರ ಪಕ್ಷದವರಿಗೆ ಒಂದೊಳ್ಳೆ ಆಸ್ಪತ್ರೆಗೆ ಸೇರಿಸಿ ಪರೀಕ್ಷೆ ಮಾಡಿಸಲಿ ಎಂದು ಟಾಂಗ್ ಕೊಟ್ಟರು.