ಪ್ರಜಾಸ್ತ್ರ ಸುದ್ದಿ (Photo: X @FIDE_chess)
ನ್ಯೂಯಾರ್ಕ್(New York): ವಸ್ತ್ರ ಸಂಹಿತೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಐದು ಬಾರಿ ವಿಶ್ವ ಚೆಸ್ ಚಾಂಪಿಯನ್ ಆಗಿರುವ ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ಅವರನ್ನು ಫಿಡೆ(ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್) ಅನರ್ಹಗೊಳಿಸಿದೆ. ವಿಶ್ವ ರ್ಯಾಪಿಡ್ ಹಾಗೂ ಬ್ಲಿಟ್ಜ್ ಚಾಂಪಿಯನ್ ಶಿಪ್ ನಿಂದ ಅನರ್ಹಗೊಳಿಸಲಾಗಿದೆ. ವಾಲ್ ಸ್ಟ್ರೀಟ್ ನಲ್ಲಿ 9ನೇ ಸುತ್ತಿನ ಪಂದ್ಯದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಸ್ತ್ರ ಸಂಹಿತೆ ಬಗ್ಗೆ ಸ್ಪರ್ಧಾಳುಗಳಿಗೆ ಮೊದಲೆ ತಿಳಿಸಲಾಗಿರುತ್ತೆ. ವೃತ್ತಿಪರತೆ ಖಚಿತೆಗಾಗಿ ಇದನ್ನು ಪಾಲಿಸಬೇಕಾಗುತ್ತೆ ಎಂದು ಫಿಡೆ ಹೇಳಿದೆ. ಜೀನ್ಸ್ ಪ್ಯಾಂಟ್ ಬದಲಿಸಲು ಹೇಳಲಾಯಿತು. ಅವರು ಅದಕ್ಕೆ ಒಪ್ಪಲಿಲ್ಲ. ನಾಳೆಯಿಂದ ಪಾಲಿಸುತ್ತೇನೆ ಎಂದರು. ಇದರಿಂದಾಗಿ ಅವರನ್ನು ಅನರ್ಹಗೊಳಿಸಲಾಯಿತು ಎಂದು ಆಯೋಜಕರು ಹೇಳಿದ್ದಾರೆ.