ಪ್ರಜಾಸ್ತ್ರ ಸುದ್ದಿ
ಗಬ್ಬಾ(Gabba): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಟೂರ್ನಿಯ 3ನೇ ಪಂದ್ಯದ 2ನೇ ದಿನದಾಟದಲ್ಲಿ ಆಸೀಸ್ ಪಡೆ ಭರ್ಜರಿ ಬ್ಯಾಟಿಂಗ್ ಮಾಡಿದೆ. ಶನಿವಾರ ಮಳೆಯಿಂದಾಗಿ ಆಟವನ್ನು ಸ್ಥಗಿತಗೊಳಿಸಲಾಗಿತ್ತು. ಭಾನುವಾರ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಅಬ್ಬರದ ಬ್ಯಾಟಿಂಗ್ ಮಾಡಿದರು. ಹೆಡ್ 152, ಸ್ಮಿತ್ 101 ರನ್ ಭಾರಿಸಿ ಮಿಂಚಿದರು. ಅಲೆಕ್ಸ್ ಕ್ಯಾರಿ ಅಜೇಯ 45, ಮಿಚೆಲ್ ಸ್ಟಾರ್ಕ್ ಅಜೇಯ 7 ರನ್ ಗಳೊಂದಿಗೆ ಕ್ರಿಸ್ ನಲ್ಲಿದ್ದಾರೆ.
2ನೇ ದಿನದಾಟದ ಅಂತಿಮ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 405 ರನ್ ಕಲೆ ಹಾಕಿದೆ. ಭಾರತ ಪರ ಉಪ ನಾಯಕ ಜಸ್ಪ್ರಿತ್ ಬೂಮ್ರಾ 5 ವಿಕೆಟ್ ಪಡೆದು ಮಿಂಚಿದರು. ಸಿರಾಜ್, ನಿತೀಶ್ ಕುಮಾರ್ ರೆಡ್ಡಿ ತಲಾ 1 ವಿಕೆಟ್ ಪಡೆದರು. ಅನುಭವಿ ಜಡೇಜಾ, ಯುವ ಬೌಲರ್ ಆಕಾಶ್ ದೀಪ್ ಮ್ಯಾಜಿಕ್ ಮಾಡಲಿಲ್ಲ. ಈ ಆಟ ನೋಡಿದರೆ ಇದು ಡ್ರಾ ಆಗುವ ಸಾಧ್ಯತೆಯಿದೆ ಎಂದು ಈಗಲೇ ಹೇಳಬಹುದು ಎನ್ನುವುದು ಕ್ರಿಕೆಟ್ ಪ್ರೇಮಿಗಳ ಲೆಕ್ಕಾಚಾರ.