Ad imageAd image

500 ಕೋಟಿ ವಂಚನೆ ಪ್ರಕರಣ: ನಟಿ ರಿಯಾ ಚಕ್ರವರ್ತಿ ಸೇರಿ 9 ಮಂದಿಗೆ ನೋಟಿಸ್

ಹೈಬಾಕ್ಸ್ ಎನ್ನುವ ಮೊಬೈಲ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರಿಯಾ ಚಕ್ರವರ್ತಿ, ಹಾಸ್ಯನಟಿ ಭಾರತಿ ಸಿಂಗ್ ಹಾಗೂ ಆಕೆಯ ಪತಿ ಹರ್ಷ್ ಲಿಂಬಾಚಿಯಾ

Nagesh Talawar
500 ಕೋಟಿ ವಂಚನೆ ಪ್ರಕರಣ: ನಟಿ ರಿಯಾ ಚಕ್ರವರ್ತಿ ಸೇರಿ 9 ಮಂದಿಗೆ ನೋಟಿಸ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮುಂಬೈ(Mumbai): ಹೈಬಾಕ್ಸ್ ಎನ್ನುವ ಮೊಬೈಲ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್(Bollywood) ನಟಿ ರಿಯಾ ಚಕ್ರವರ್ತಿ, ಹಾಸ್ಯನಟಿ ಭಾರತಿ ಸಿಂಗ್ ಹಾಗೂ ಆಕೆಯ ಪತಿ ಹರ್ಷ್ ಲಿಂಬಾಚಿಯಾ ಸೇರದಂತೆ 9 ಮಂದಿಗೆ ನೋಟಿಸ್(Summon) ನೀಡಲಾಗಿದೆ. ಆ್ಯಪ್ ಆಧರಿತಿ 500 ಕೋಟಿ ರೂಪಾಯಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ನೋಟಿಸ್ ನೀಡಿದ್ದಾರೆ.

ಹೈಬಾಕ್ಸ್ ಮೊಬೈಲ್ ಅಪ್ಲಿಕೇಷನ್ ಪ್ರಚಾರ ಮಾಡಿದ್ದಾರೆ. ಇಲ್ಲಿ ಹಣ ಹೂಡಿಕೆ ಮಾಡಿ ಲಾಭ ಗಳಿಸುವ ಸಂಬಂಧ ಪ್ರಚಾರ ಮಾಡಿದ್ದಾರೆ. ಫೆಬ್ರವರಿಯಲ್ಲಿ ಶುರುವಾದ ಅಪ್ಲಿಕೇಷನ್ ನಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಹಣ ಹೂಡಿಕೆ ಮಾಡಿದ್ದಾರೆ. ಈ ಕುರಿತು 500ಕ್ಕೂ ಅಧಿಕ ದೂರುಗಳು ಬಂದಿವೆ. ಪ್ರಮುಖ ಆರೋಪಿ ಚೆನ್ನೈ ಮೂಲದ ಶಿವರಾಮ್ ಎಂಬಾತನನ್ನು ಬಂಧಿಸಲಾಗಿದೆ.

ಸಾಮಾಜಿಕ(Social Media) ಜಾಲತಾಣಗಳ ಪ್ರಭಾವಿಗಳಾದ, ಯುಟ್ಯೂಬರ್ ಗಳಾದ ಲಕ್ಷ್ಯ ಚೌಧರಿ, ಸೌರವ್ ಜೋಶಿ, ಪರವ್ ಝಾ, ಎಲ್ವಿಶ್ ಯಾದವ್, ಆದರ್ಶ್ ಸಿಂಗ್, ಅಭಿಷೇಕ್ ಮಲ್ಹಾನ್, ದಿಲ್ರಾಜ್ ಸಿಂಗ್ ರಾವತ್ ಸೇರಿದಂತೆ 9 ಮಂದಿ ವಿರುದ್ಧ ದೂರು ದಾಖಲಾಗಿದೆ. ಇವರಿಗೆಲ್ಲ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

WhatsApp Group Join Now
Telegram Group Join Now
Share This Article