ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಾವಿರ ರೂಪಾಯಿ ನೋಟು ಬ್ಯಾನ್ ಆದ ಬಳಿಕ ಬಂದಿದ್ದೆ 2 ಸಾವಿರ ರೂಪಾಯಿಯ ಪಿಂಕ್ ನೋಟು ಹಾಗೂ 500 ರೂಪಾಯಿ ಹೊಸ ನೋಟು. ಕಪ್ಪು ಹಣ ಹೊರಗೆಳೆಯಲು ನೋಟ್ ಬ್ಯಾನ್ ಅಂದರು. ಆದರೆ, ಅತ್ಯಂತ ಸಮಸ್ಯೆ ಎದುರಿಸಿದ್ದು ಮಾತ್ರ ಸಾಮಾನ್ಯ ಜನರು. ಕಪ್ಪು ಹಣವನ್ನು ವೈಟ್ ಮಾಡಲು ಮಾಡಿದ ತಂತ್ರ ಎಂದು ಸಹ ಆರೋಪಿಸಲಾಯಿತು. ಯಾಕಂದರೆ, ಪಿಂಕ್ ನೋಟ್ ಬಂದಷ್ಟೇ ವೇಗವಾಗಿ ವಾಪಸ್ ಹೋಯ್ತು. ಇದೀಗ 500 ರೂಪಾಯಿ ನೋಟ್ ಸಹ ರದ್ದಾಗುತ್ತೆ ಅನ್ನೋ ಚರ್ಚೆ ಶುರುವಾಗಿದೆ.
ಕಪ್ಪು ಹಣವನ್ನು ಮಟ್ಟ ಹಾಕಲು 500 ರೂಪಾಯಿ ನೋಟು ರದ್ದುಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಸಣ್ಣ ನೋಟುಗಳನ್ನು ಉತ್ತೇಜನಗೊಳಿಸುವುದಾಗಿದೆಯಂತೆ. 100, 200 ರೂಪಾಯಿ ನೋಟುಗಳ ಚಲಾವಣೆ ಹೆಚ್ಚಿಗೆ ಮಾಡುವುದು. ಹೀಗಾಗಿ ಹಂತ ಹಂತವಾಗಿ 500 ರೂಪಾಯಿ ನೋಟು ನಿಲ್ಲಿಸಲಾಗುತ್ತದೆಯಂತೆ. 2026ರ ಮಾರ್ಚ್ ತನಕ ಈ ಪ್ರಕ್ರಿಯೆ ನಡೆಯಲಿದ್ದು, ನಿಧಾನವಾಗಿ ಮಾರುಕಟ್ಟೆಯಿಂದ ಕಣ್ಮರೆಯಾಗಲಿದೆಯಂತೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಗುವ ಹಣದಲ್ಲಿ ಇರುವುದೆಲ್ಲ 500 ರೂಪಾಯಿ ನೋಟುಗಳಾಗಿವೆ. ಹೀಗಾಗಿ ಭ್ರಷ್ಟರ ವಿರುದ್ಧದ ಹೋರಾಟ, ಡಿಜಿಟಿಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಒತ್ತು ನೀಡುವ ದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಬ್ಯಾಂಕಿಂಗ್ ತಜ್ಞರು ಹೇಳುತ್ತಿದ್ದಾರಂತೆ. ಅದೇನೆ ಇರಲಿ ಹೊಸ ನೋಟು ಚಲಾವಣೆ ಹಾಗೂ ರದ್ದು ಅನ್ನೋದು ಜನಸಾಮಾನ್ಯರಿಗೆ ಹೊರೆಯಾಗದಿರಲಿ.