ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಸ್ಯಾಂಡ್ ಅಪ್ ಕಾಮಿಡಿಯನ್ ಕುನಾಲ್ ಕುಮ್ರಾ ಮುಂಬೈನ ಖಾರ್ ನಲ್ಲಿರುವ ಹ್ಯಾಬಿಟಾಟ್ ಕಾಮಿಡಿ ಕ್ಲಬ್ ನಲ್ಲಿ ನೀಡಿದ ಪ್ರದರ್ಶನದ ವೇಳೆ ಮಹಾರಾಷ್ಟ್ರದ ರಾಜಕೀಯವನ್ನು ವಿಡಂಬನೆಯ ಮೂಲಕ ಹೇಳಿದ್ದರು. ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೆಸರು ಪ್ರಸ್ತಾಪಿಸದೆ ಟೀಕೆಗಳನ್ನು ಮಾಡಿದ್ದರು. ಇದು ದೊಡ್ಡ ವಿವಾದವಾಗಿದೆ. ಕ್ಲಬ್ ಮೇಲೆ ಶಿಂಧೆ ಬಣದ ಶಿವಸೇನಾ ಕಾರ್ಯಕರ್ತರು ದಾಳಿ ಮಾಡಿ ಸಾಕಷ್ಟು ಹಾನಿ ಮಾಡಿದ್ದಾರೆ. ಈ ಘಟನೆ ಸಂಬಂಧ ಕುಮ್ರಾ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಂಗಳವಾರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು. ಆತನ ಮೂಲಗಳ ಪ್ರಕಾರ ಒಂದು ವಾರ ಕಾಲಾವಕಾಶ ಕೇಳಿದ್ದಾನಂತೆ. ಶಿಂಧೆ ಬಣದ ಶಿವಸೇನೆ ಕಾರ್ಯಕರ್ತರು, ಬೆಂಬಲಿಗರಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ. 500ಕ್ಕೂ ಹೆಚ್ಚು ಕರೆಗಳು ಬಂದಿದ್ದು ತುಂಡು ತುಂಡು ಮಾಡಿ ಕತ್ತರಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರಂತೆ. ಈ ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದ್ದಾರೆ.