Ad imageAd image

ವಿಜಯಪುರ ಜಿಲ್ಲೆಯಲ್ಲಿ 57 ಮನೆ, 2 ಸಾವಿರ ಹೆಕ್ಟೆರ್ ಬೆಳೆ ಹಾನಿ

ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ 76 ಎಂಎಂ, ಇಂಡಿ ತಾಲೂಕಿನಲ್ಲಿ ಕನಿಷ್ಠ 70 ಎಂಎಂ, ವಿಜಯಪುರ ನಗರ ಸೇರಿದಂತೆ ವಿಜಯಪುರ ತಾಲೂಕಿನಲ್ಲಿ

Nagesh Talawar
ವಿಜಯಪುರ ಜಿಲ್ಲೆಯಲ್ಲಿ 57 ಮನೆ, 2 ಸಾವಿರ ಹೆಕ್ಟೆರ್ ಬೆಳೆ ಹಾನಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ 76 ಎಂಎಂ, ಇಂಡಿ ತಾಲೂಕಿನಲ್ಲಿ ಕನಿಷ್ಠ 70 ಎಂಎಂ, ವಿಜಯಪುರ ನಗರ ಸೇರಿದಂತೆ ವಿಜಯಪುರ ತಾಲೂಕಿನಲ್ಲಿ 40ಎಂಎಂ ಮಳೆಯಾಗಿದ್ದು, ವಿಜಯಪುರ ನಗರದಲ್ಲಿ ವಿವಿಧೆಡೆ ನೀರು ನಿಂತಿರುವ ಪ್ರದೇಶಗಳಲ್ಲಿ ಮಹಾನಗರಪಾಲಿಕೆ ವತಿಯಿಂದ ಯಂತ್ರಗಳಿಂದ ನೀರು ಹೊರ ಹಾಕುವ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.

ಮನೆಹಾನಿ: ಜಿಲ್ಲೆಯಲ್ಲಿ 57 ಮನೆಗಳು ಭಾಗಶಃ ಹಾನಿಯಾಗಿವೆ. ಸಂಪೂರ್ಣ ಮನೆಹಾನಿ ಯಾವುದು ಇಲ್ಲ. ಯಾವುದೇ ಜನ-ಜಾನುವಾರ ಸಂಭವಿಸಿರುವುದಿಲ್ಲ. 2 ಸಾವಿರ ಹೆಕ್ಟೆರಷ್ಟು ಅಂದಾಜು ಬೆಳೆ(Crop Loss) ಹಾನಿಯಾಗಿದೆ. ಸಮೀಕ್ಷೆ ಕೈಗೊಂಡಿದ್ದು, ಸಮೀಕ್ಷೆ ಮುಗಿದ ನಂತರ ನಿಖರ ಮಾಹಿತಿ ದೊರೆಯಲಿದೆ ಎಂದು ಹೇಳಿದರು. ಸೆಪ್ಟೆಂಬರ್ 25ರಂದು ಜಿಲ್ಲಾ ಉಸ್ತುವಾರಿ ಸಚಿವರು ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ, ಸಾರ್ವಜನಿಕರ ಮನವಿ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ. ಸಚಿವರ ನಿರ್ದೇಶನದಂತೆ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article