ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಕ್ರೂಸರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು 6 ಜನರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ(Madhya Pradesh) ಜಬಲಪುರ ಹತ್ತಿರ ಸೋಮವಾರ ನಸುಕಿನಜಾವ ನಡೆದಿದೆ. ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನವರೆಂದು ತಿಳಿದು ಬಂದಿದೆ. ಇವರೆಲ್ಲ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಹೋಗಿದ್ದರು.
ಬಸವರಾಜ ದೊಡ್ಡಮಾಳ, ವಿರೂಪಾಕ್ಷ ಗುಮತಿ, ಬಾಲಚಂದ್ರ ಗೌಡರ, ಬಸವರಾಜ ಕುರ್ತಿ, ಈರಣ್ಣ ಶೇಬಿನಕಟ್ಟಿ, ಸುನೀಲ್ ಶೇಡಶ್ಯಾಳೆ ಮೃತ ದುರ್ದೈವಿಗಳು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಬಲಪುರ್(Jabalpur) ಜಿಲ್ಲಾಧಿಕಾರಿ ದೀಪಕ್ ಸಕ್ಸೇನಾ ತಿಳಿಸಿದ್ದಾರೆ. ಈ ಕುರಿತು ಗೋಕಾಕ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.