Ad imageAd image

ರಾಜ್ಯದಲ್ಲಿ ಒಂದೇ ದಿನದಲ್ಲಿ 6 ಜನರು ಹೃದಯಾಘಾತದಿಂದ ಸಾವು

Nagesh Talawar
ರಾಜ್ಯದಲ್ಲಿ ಒಂದೇ ದಿನದಲ್ಲಿ 6 ಜನರು ಹೃದಯಾಘಾತದಿಂದ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ರಾಜ್ಯದಲ್ಲಿ ಹೃದಯಾಘಾತದಿಂದ ಮೃತಪಡುತ್ತಿರುವ ಸಂಖ್ಯೆ ಏರಿಕೆಯಾಗುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಿದೆ. ಹಾಸನದಲ್ಲಿ ಭಯ ಮೂಡಿಸಿದೆ. ಯಾಕಂದರೆ ಹಾಸನದಲ್ಲಿ ಮತ್ತೆ ಮೂವರು ಸಾವು ಆಗಿದೆ. ದಾವಣಗೆರೆ, ಮೈಸೂರು, ಕಲಬುರಗಿಯಲ್ಲಿಯೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೈಸೂರಿನ ವಿಜಯನಗರದ ಜಿಮ್ ನಲ್ಲಿ 51 ವರ್ಷದ ಬಿ.ಎನ್ ಶ್ರೀಧರ್ ಎಂಬುವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರು ಮೂಲತ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಜುಂಜನಹಳ್ಳಿಯವರಾಗಿದ್ದಾರೆ. ಸಕಲೇಶಪುರದ ಚಿಕ್ಕನಾಯಕನಹಳ್ಳಿಯಲ್ಲಿ ಸಿ.ಬಿ ವಿರುಪಾಕ್ಷ(70) ಕಳೆದ ರಾತ್ರಿ 11.30ಕ್ಕೆ ಮೃತಪಟ್ಟಿದ್ದಾರೆ. ಆಲೂರು ತಾಲೂಕಿನ ಕಲ್ಲಾರೆ ಗ್ರಾಮದ 38 ವರ್ಷದ ಸಂತೋಷ ಮೃತಪಟ್ಟಿದ್ದಾರೆ.

ಇನ್ನು ತರೀಕೆರೆ ತಾಲೂಕಿನ ಶಿವಾನಿ ಗ್ರಾಮದ 29 ವರ್ಷದ ಹರೀಶ್ ಬೆಳಗಿನಜಾವ 2.30ರ ಸುಮಾರಿಗೆ ಮೃತಪಟ್ಟಿದ್ದಾರೆ. ದಾವಣಗೆರೆ ತಾಲೂಕಿನ ಐಗೂರು ಗ್ರಾಮದ ಗೊಲ್ಲರಟ್ಟಿ ಜಯಪ್ಪ(44), ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಸಂತೋಷ ಇಂಡಿ(36) ಜಮೀನಿನಲ್ಲಿ ಕೆಲಸ ಮಾಡುವಾಗ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.

WhatsApp Group Join Now
Telegram Group Join Now
Share This Article