ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijaypura): ವೋಲ್ವೋ ಕಾರಿನ ಮೇಲೆ ಕಂಟೇನರ್ ಬಿದ್ದು ಇಬ್ಬರು ಮಕ್ಕಳು ಸೇರಿ 6 ಜನರು ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನೆಲಮಂಗಲದ ಹತ್ತಿರ ನಡೆದಿದೆ. ಹೀಗೆ ಮೃತಪಟ್ಟ ಒಂದೇ ಕುಟುಂಬದ 6 ಜನರು ವಿಜಯಪುರ ಮೂಲದವರು ಎಂದು ತಿಳಿದು ಬಂದಿದೆ. ಚಂದ್ರಯಾಗಪ್ಪ ಗೌಳ್(48), ಗೌರಾಬಾಯಿ(42), ವಿಜಯಲಕ್ಷ್ಮಿ(36), ಜಾನ್(16), ದೀಕ್ಷಾ(12) ಹಾಗೂ ಆರ್ಯ(06) ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ.
ಚಂದ್ರಯಾಗಪ್ಪ ಐಟಿ ಉದ್ಯಮಿಯಾಗಿದ್ದಾರೆ. ನೂರಾರು ಜನರು ಉದ್ಯೋಗ ಮಾಡುತ್ತಿದ್ದಾರೆ. ಇಂದು ವಾರಂತ್ಯದ ರಜೆಯ ಹಿನ್ನಲೆಯಲ್ಲಿ ಪ್ರವಾಸಕ್ಕೆ ಹೊರಟ್ಟಿದ್ದರಂತೆ. ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.