Ad imageAd image

ಗರ್ಭಿಣಿ ಎಂದವರಿಗೆ 66 ವರ್ಷದ ನಟಿ ನೀನಾ ಕೊಟ್ಟರು ಸ್ಪಷ್ಟನೆ

Nagesh Talawar
ಗರ್ಭಿಣಿ ಎಂದವರಿಗೆ 66 ವರ್ಷದ ನಟಿ ನೀನಾ ಕೊಟ್ಟರು ಸ್ಪಷ್ಟನೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹೈದರಾಬಾದ್(Hydrebad): ಬಾಲಿವುಡ್ ನಟಿ ನೀನಾ ಗುಪ್ತಾ 66ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವ ಫೋಟೋ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ನಟ ವಿಜಯ್ ದೇವರಕೊಂಡ, ನಟಿ ರಶ್ಮಿಕಾ ಮಂದಣ್ಣ ಮದುವೆಯಲ್ಲಿ ಕಾಣಿಸಿಕೊಂಡಿದ್ದ ನೀನಾ ಗುಪ್ತಾ ಅವರು ಹೊಟ್ಟೆ ತುಸು ದಪ್ಪವಾಗಿ ಕಾಣಿಸಿಕೊಂಡಿದೆ. ಹೀಗಾಗಿ ಗರ್ಭಿಣಿಯಾಗಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ.

ಈ ಬಗ್ಗೆ 66 ವರ್ಷದ ನಟಿ ನೀನಾ ಗುಪ್ತಾ ಸ್ಪಷ್ಟನೆ ಕೊಟ್ಟಿದ್ದು, ನಾನು ಗರ್ಭಿಣಿ ಇಲ್ಲ. ನಾನು ಉಟ್ಟಿದ್ದ ಸೀರೆ ಫಿಟಿಂಗ್ಸ್ ಸ್ವಲ್ಪ ದಪ್ಪವಿದ್ಧ ಕಾರಣಕ್ಕೆ ಹಾಗೆ ಕಂಡಿದೆ. ಅಸಲಿಗೆ ಅಲ್ಲಿ ಏನೂ ಇಲ್ಲ. ನನ್ನ ವಯಸ್ಸಿನಲ್ಲಿ ಗರ್ಭಧರಿಸಿದ್ದೇನೆ ಅನ್ನೋ ಊಹಾಪೋಹಗಳ ಬಗ್ಗೆ ಇಷ್ಟಪಡುತ್ತೇನೆ. ಆದರೆ ಅಸಲಿಗೆ ನಾನು ಗರ್ಭಿಣಿ ಅಲ್ಲ ಎಂದಿದ್ದಾರೆ. ನಟಿ ನೀನಾ ಗುಪ್ತಾ ಮೊದಲ ವೆಸ್ಟ್ ಇಂಡೀಸ್ ಕ್ರಿಕೆಟ್ ಪ್ಲೇಯರ್ ವಿವಿಯನ್ ರಿಚರ್ಡ್ ಜೊತೆ ಹಲವು ವರ್ಷಗಳ ಕಾಲ ಕೂಡಿಯಿದ್ದರು. ಅವರಿಗೊಂದು ಮಗು ಆಯಿತು. ಆದರೆ ರಿಚರ್ಡ್ ಮದುವೆಯಾಗಲು ಒಪ್ಪಲಿಲ್ಲ. ಎಲ್ಲ ವಿರೋಧಗಳ ನಡುವೆ ಮಗುವನ್ನು ಇವರೆ ಬೆಳೆಸಿದರು. 2008ರಲ್ಲಿ ಚಾರ್ಟಡ್ ಅಕೌಂಟ್ ವಿವೇಕ್ ಮೆಹ್ರಾ ಅವರನ್ನು ಮದುವೆಯಾದರು.

WhatsApp Group Join Now
Telegram Group Join Now
Share This Article