ಪ್ರಜಾಸ್ತ್ರ ಸುದ್ದಿ
ಪಾಟ್ನಾ(Patna): ಬಿಹಾರ ವಿಧಾನಸಭೆ ಚುನಾವಣೆಯ 2ನೇ ಹಾಗೂ ಕೊನೆಯ ಹಂತದ ಮತದಾನ ಮಂಗಳವಾರ ನಡೆಯಿತು. ಒಟ್ಟು ಶೇಕಡ 67.14ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. 122 ಕ್ಷೇತ್ರಗಳಿಗೆ ಮಂಗಳವಾರ ಮತ ಹಾಕಲಾಯಿತು. ಒಟ್ಟು3.70 ಕೋಟಿ ಮತದಾರರಿದ್ದರು.
ನವೆಂಬರ್ 6ರಂದು 121 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಶೇಕಡ 65.09ರಷ್ಟು ಮತದಾನವಾಗಿತ್ತು. ಇಲ್ಲಿ 3.75 ಕೋಟಿ ಮತದಾರರು ಇದ್ದಾರೆ. ಬಿಹಾರ ವಿಧಾನಸಭೆ 243 ಕ್ಷೇತ್ರಗಳನ್ನು ಹೊಂದಿದೆ. ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.




