ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬುಧವಾರ ಮಧ್ಯಹ್ನ ಜನರ ಮಧ್ಯದಲ್ಲಿಯೇ ಎಟಿಎಂಗೆ ಹಣ ತುಂಬಿಸಲು ಹೊರಟಿದ್ದ ವಾಹವನ್ನು ಅಡ್ಡಗಟ್ಟಿ, ತಾವು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಂದು ಹೇಳಿ ಬರೋಬ್ಬರಿ 7.11 ಕೋಟಿ ರೂಪಾಯಿ ದೋಚಿ ಪರಾರಿಯಾಗಿದ್ದಾರೆ. ನಗರದ ಅಶೋಕ ಪಿಲ್ಲರ್ ಹತ್ತಿರ ಈ ಘಟನೆ ನಡೆದಿದೆ.
ಜೆಪಿ ನಗರದ ಹೆಚ್ ಡಿಎಫ್ ಸಿ ಬ್ಯಾಂಕ್ ನಿಂದ ಹಣ ತುಂಬಿಸಿಕೊಂಡ ಸಿಎಂಎಸ್ ಕಂಪನಿಯ ವಾಹನ ಹೊರಟಿದ್ದಾಗ ಇನೋವಾ ಕಾರಿನಲ್ಲಿ ಬಂದು ಅಡ್ಡಗಟ್ಟಿದ್ದಾರೆ. ನಾವು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಂದು ಹಣದ ಮಾಹಿತಿ ಹೇಳಿದ್ದಾರೆ. ನಂತರ ಸಿಬ್ಬಂದಿಯನ್ನು ಕಾರಿನಲ್ಲಿ ಕುರಿಸಿಕೊಂಡು ಹೋಗಿ ಡೇರಿ ಸರ್ಕಲ್ ಬಳಿ ಅವರನ್ನು ಇಳಿಸಿ 7.11 ಕೋಟಿ ರೂಪಾಯಿ ಹಣದ ಸಮೇತ ಪರಾರಿಯಾಗಿದ್ದಾರೆ.




