ಪ್ರಜಾಸ್ತ್ರ ಸುದ್ದಿ
ಗುವಾಹಟಿ: ಸೈರಾಂಗ್-ನವದೆಹಲಿ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 7 ಆನೆಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದು, 1 ಆನೆ ಗಂಭೀರವಾಗಿ ಗಾಯಗೊಂಡಿದೆ. ರೈಲು ಎಂಜಿನ್ ಹಾಗೂ ಬೋಗಿಗಳು ಹಳಿ ತಪ್ಪಿದ್ದು, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಸೈರಾಂಗ್ ನಿಂದ ನವದೆಹಲಿಗೆ ಹೊರಟಿದ್ದ ರೈಲು ಹೊಜೈ ಜಿಲ್ಲೆಯ ಚಾಂಗ್ಜುರೈ ಪ್ರದೇಶದಲ್ಲಿ ಶನಿವಾರ ಬೆಳಗಿನಜಾವ 2.17ರ ಸುಮಾರಿಗೆ ಈ ಅಪಘಾತ ನಡೆದಿದೆ. ಈ ಘಟನೆಯಿಂದಾಗಿ ಜಮುನಾಮುಖ್-ಕಂಪುರ ವಿಭಾಗ ಮೂಲಕ ಸಂಚರಿಸಬೇಕಿದ್ದ ರೈಲುಗಳು ಉತ್ತರ ಪ್ರದೇಶದ ಮೂಲಕ ಸಂಚರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




