ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿ ಪವಿತ್ರಾಗೌಡ, ಎ2 ಆರೋಪಿ ದರ್ಶನ್ ಸೇರಿದಂತೆ 7 ಜನರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಇವರೆಲ್ಲರಿಗೂ ಬಿಗ್ ರಿಲೀಫ್ ಸಿಕ್ಕಂತಾಗಿದೆ. ದರ್ಶನ್ ಈಗಾಗ್ಲೇ ವೈದ್ಯಕೀಯ ಆಧಾರದ ಮೇಲಿನ ಮಧ್ಯಂತರ ಜಾಮೀನು ಸಿಕ್ಕಿತ್ತು. ಈಗ ರೆಗ್ಯೂಲರ್ ಜಾಮೀನು ಸಕ್ಕಿದೆ. ಹೀಗಾಗಿ ಇನ್ಮುಂದೆ ಇವರು ಆರಾಮವಾಗಿ ಇರಬಹುದು.
ದರ್ಶನ್, ಪವಿತ್ರಾಗೌಡ, ದರ್ಶನ್ ಮ್ಯಾನೇಜರ್ ನಾಗರಾಜು, ಸ್ನೇಹಿತರಾದ ಅನುಕುಮಾರ್, ಪ್ರದೋಶ, ಲಕ್ಷ್ಮಣ ಸೇರಿ 7 ಆರೋಪಿಗಳಿಗೆ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕಳೆದ ಸುಮಾರು 6 ತಿಂಗಳಿನಿಂದ ಜೈಲಿನಲ್ಲಿರುವ ಪವಿತ್ರಾಗೌಡ, ನಾಗರಾಜು, ಅನುಕುಮಾರ್, ಪ್ರದೋಶ್, ಲಕ್ಷ್ಮಣ ಬಿಗ್ ರಿಲೀಫ್ ಸಿಕ್ಕಿದೆ. ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿದರು. ಪವಿತ್ರಾಗೌಡ ಪರ ಸಬಾಸ್ಟಿನ್ ವಾದ ಮಂಡಿಸಿದರು.
ಪ್ರಾಸಿಕ್ಯೂಷನ್ ಪರ ಪ್ರಸನ್ನಕುಮಾರ್ ವಾದ ಮಂಡಿಸಿದರು. ರೆಗ್ಯೂಲರ್ ಜಾಮೀನು ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿತ್ತು. ಈ ಕೊಲೆ ಪ್ರಕರಣದಲ್ಲಿ 12 ಜನರಿಗೆ ಬೇಲ್ ಸಿಕ್ಕಂತಾಗಿದೆ. ಇನ್ನು ಮೂವರು ಜೈಲಿನಲ್ಲಿದ್ದಾರೆ.