ಪ್ರಜಾಸ್ತ್ರ ಸುದ್ದಿ
ಡೆಹ್ರಾಡೂನ್(Dehradun): ಒಂದೇ ಕುಟುಂಬದ 7 ಜನರು ವಿಷ ಸೇವಿಸಿ ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಡೆಹ್ರಾಡೂನ್ ನಲ್ಲಿ ನಡೆದಿದೆ. ಪಂಚಕುಲದ ಸೆಕ್ಟರ್ 27ರಲ್ಲಿ ಮನೆಯ ಹೊರಗೆ ನಿಲ್ಲಿಸಿದ ಕಾರಿನಲ್ಲಿ ಶವಗಳು ಪತ್ತೆಯಾಗಿವೆ. ಪ್ರವೀಣ್ ಮಿತ್ತಲ್(42) ಎಂಬುವರ ಕುಟುಂಬಸ್ಥರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರವೀಣ್, ಇವರ ಪತ್ನಿ, ಇಬ್ಬರು ಹೆಣ್ಮಕ್ಕಳು, ಓರ್ವ ಮಗ, ಪೋಷಕರು ಸೇರಿ 7 ಜನರು ವಿಷಯ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಸಾಲ, ಆರ್ಥಿಕ ಸಂಕಷ್ಟದಿಂದ ಈ ರೀತಿ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆಯಿಂದ ಸತ್ಯ ಬೆಳಕಿಗೆ ಬರಲಿದೆ.