ಪ್ರಜಾಸ್ತ್ರ ಸುದ್ದಿ
ತಿರುವಣ್ಣಾಮಲೈ(Tiruvannamalai): ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಫಂಗಲ್ ಚಂಡಮಾರುತದ ಪರಿಣಾಮ ಭೂಕುಸಿತ(Landslide) ಉಂಟಾಗಿದೆ. ಇದರಿಂದಾಗಿ ಅವಶೇಷಗಳಡಿಯಲ್ಲಿ 7 ಜನರು ಸಿಲುಕಿಕೊಂಡಿದ್ದಾರೆ. ಎನ್ ಡಿಆರ್ ಎಫ್(NDRF) ತಂಡ, ಪೊಲೀಸರು, ಅಗ್ನಿಶಾಮಕ ದಳದವರು ಕಳೆದ 12 ಗಂಟೆಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೃಹತ್ ಗಾತ್ರದ ಕಲ್ಲುಗಳು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವಶೇಷಗಳಡಿಯಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಮಾನವಶಕ್ತಿಯನ್ನೇ ಬಳಸುತ್ತಿದ್ದೇವೆ. ಮೊದಲು ಕಲ್ಲು ತೆಗೆಯುವುದು ನಮ್ಮ ಆದ್ಯತೆಯಾಗಿದೆ. ಜೆಸಿಬಿ, ಯಂತ್ರಗಳನ್ನು ತರಲು ಪ್ರಯತ್ನಿಸುತ್ತಿದ್ದೇವೆ. ಯಂತ್ರಗಳಿಂದ ಕಾರ್ಯಾಚರಣೆ ನಡೆಸುವುದು ಸವಾಲಾಗಿದೆ ಎಂದಿದ್ದಾರೆ. ಸ್ಥಳದಕ್ಕೆ ಸಚಿವ ಇ.ವಿ ವೇಲು, ಜಿಲ್ಲಾಧಿಕಾರಿ ಭಾಸ್ಕರ್ ಪಾಂಡಿಯನ್ ಸೇರಿ ಇತರೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.