ಪ್ರಜಾಸ್ತ್ರ ಸುದ್ದಿ
ತಮಿಳುನಾಡು(Tamilunadu): ಮದುವೆಯಾದ ಎರಡು ತಿಂಗಳಲ್ಲೇ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿರುಪ್ಪೂರು ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಜವಳಿ ವ್ಯಾಪಾರಿ ಅಣ್ಣಾದೊರೈ ಎಂಬುವರ ಪುತ್ರಿ ರಿಧಾನ್ಯ(27) ಮೃತಪಟ್ಟ ಯುವತಿಯಾಗಿದ್ದಾಳೆ. ಏಪ್ರಿಲ್ ನಲ್ಲಿ ಕವಿನ್ ಕುಮಾರ್(28) ಅನ್ನೋ ಹುಡುಗನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ವರದಕ್ಷಿಣೆಗಾಗಿ ಅತ್ತೆ, ಮಾವ ಮಾನಸಿಕ ಕಿರುಕುಳ ಕೊಟ್ಟರೆ, ಗಂಡ ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎಂದು ಯುವತಿ ಸಾಯುವ ಮೊದಲು ತಂದೆ ಮಾಡಿದ ಆಡಿಯೋ ಮೆಸೇಜ್ ನಲ್ಲಿ ಹೇಳಿದ್ದಾಳಂತೆ.
ತಂದೆ 7 ಆಡಿಯೋ ಸಂದೇಶಗಳನ್ನು ಕಳಿಸಿದ್ದಾಳಂತೆ. ಅದರಲ್ಲಿ ತನಗೆ ಆಗುತ್ತಿರುವ ಅನ್ಯಾಯ, ಹಿಂಸೆ, ಕಿರುಕುಳದ ಬಗ್ಗೆ ಹೇಳಿದ್ದು, ತನ್ನನ್ನು ಕ್ಷಮಿಸಿ ಎಂದು ಹೆತ್ತವರಲ್ಲಿ ಕೇಳಿಕೊಂಡಿದ್ದಾಳೆ. ಭಾನುವಾರ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ರಿಧಾನ್ಯ ಕಾರಿನಲ್ಲಿ ಮನೆಯಿಂದ ಹೋಗಿದ್ದಾಳೆ. ದಾರಿಯಲ್ಲಿ ಕೀಟನಾಶಕ ಕುಡಿದಿದ್ದಾಳೆ. ಕಾರಿನಲ್ಲಿದ್ದ ಯುವತಿಯನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡುವ ವೇಳೆಗಾಗಲೇ ಆಕೆ ಮೃತಪಟ್ಟಿದ್ದಳು ಎಂದು ಹೇಳಲಾಗುತ್ತಿದೆ.
70 ಲಕ್ಷದ ಕಾರು, 800 ಗ್ರಾಂ ಚಿನ್ನ ಕೊಟ್ಟು ಮದುವೆ: ಜವಳಿ ಉದ್ಯಮಿಯಾಗಿದ್ದರಿಂದ ಅಣ್ಣದೊರೈ ಮಗಳ ಮದುವೆಯನ್ನು ತುಂಬಾ ಅದ್ಧೂರಿಯಾಗಿ ಮಾಡಿದ್ದ. ವರದಕ್ಷಿಣೆಯಾಗಿ ಬರೋಬ್ಬರಿ 70 ಲಕ್ಷ ರೂಪಾಯಿ ವೋಲ್ವೊ ಕಾರು, 800 ಗ್ರಾಂ ಚಿನ್ನಾಭರಣ ನೀಡಿದ್ದರಂತೆ. ಆದರೂ ಹುಡುಗನ ಮನೆಯವರು ಇನ್ನಷ್ಟು ಬೇಡಿಕೆಗಾಗಿ ಹಿಂಸೆ ಕೊಡುತ್ತಿದ್ದರಂತೆ. ಇದರಿಂದ ಮನನೊಂದು ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ಪತಿ ಹಾಗೂ ಆತನ ಕುಟುಂಬಸ್ಥರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ.