ಪ್ರಜಾಸ್ತ್ರ ಸುದ್ದಿ
ದಾಂತೇವಾಡ: 21 ಮಹಿಳೆಯರು, 17 ವರ್ಷದ ಒಬ್ಬ ಬಾಲಕ, 16 ಹಾಗೂ 17 ವರ್ಷದ ಇಬ್ಬರು ಬಾಲಕಿಯರು ಸೇರಿದಂತೆ 71 ನಕ್ಸಲರು ಬುಧವಾರ ಶರಣಾಗತಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಲ್ಲಿ 30 ಮಂದಿ ತಲೆಗೆ ಒಟ್ಟು 64 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ಬಾಸ್ತಾರ್ ವಲಯ ಪೊಲೀಸರು ಪುನರ್ವಸತಿ ಅಭಿಯಾನ ಹಾಗೂ ರಾಜ್ಯ ಸರ್ಕಾರದ ಹೊಸ ಶರಣಾಗತಿ ಮತ್ತು ಪುನರ್ವಸತಿ ನೀತಿಯಿಂದ ಪ್ರೇರಣೆಯಾಗಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿರುವುದಾಗಿ ತಿಳಿಸಿದ್ದಾರೆ. ಬಮನ್ ಮಡ್ಕಂ, ಶಮಿಲಾ ಮಾಂಡವಿ ಅವರ ತಲೆಗೆ 20 ಲಕ್ಷ ರೂಪಾಯಿ, ದೇವಿ ಅಲಿಯಾಸ್ ಕವಿತಾ ರೆಡ್ಡಿ, ಸಂತೋಷ ಮಾಂಡ್ವಿ, ಗಂಗಿ ಅಲಿಯಾಸ್ ರೋಹಿಣಿ ಬರ್ಸೆ, ಶಮಿಲಾ ಅಲಿಯಾಸ್ ಸೋಮ್ಲಿ ಕವಾಸಿ ಅವರ ತಲೆ 5 ಲಕ್ಷ ರೂಪಾಯಿ, ಒಬ್ಬರಿಗೆ 3 ಲಕ್ಷ, 6 ಮಂದಿಗೆ 2 ಲಕ್ಷ, 9 ಮಂದಿಗೆ 1 ಲಕ್ಷ ಹಾಗೂ 6 ಮಂದಿ ತಲೆಗೆ 50 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.