ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ರಾಜ್ಯಸಭೆಯಲ್ಲಿ ಶನಿವಾರ ಲಿಖಿತ ಉತ್ತರ ನೀಡಿದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ರಾಜ್ಯ ಸಚಿವ ಎಲ್.ಮುರುಗನ್, ಅಶ್ಲೀಲ ಜಾಹೀರಾತು(Vulgar Ads) ಪ್ರಕರಣ ಸಂಬಂಧ ಖಾಸಗಿ ಟಿವಿ ಚಾನಲ್ ಗಳ ವಿರುದ್ಧ ಕಳೆದ 3 ವರ್ಷಗಳಲ್ಲಿ 73 ದೂರುಗಳು ದಾಖಲಾಗಿವೆ ಎಂದರು. ಇದರ ಬಗ್ಗೆ ಮೂರು ಹಂತಗಳಲ್ಲಿ ಪರಿಶೀಲನೆ ನಡೆಸಲಾಗಿದೆ ಅಂತಾ ರಾಜ್ಯಸಭೆಗೆ ತಿಳಿಸಿದ್ದಾರೆ.
ಒಟಿಟಿ ವೇದಿಕೆಗಳು ಐಟಿ ಕಾಯ್ದೆ 2021ರ ನೀತಿ ಸಂಹಿತೆ ಭಾಗ-3ಕ್ಕೆ ನಿಷ್ಟರಾಗಿರಬೇಕು. ಮಕ್ಕಳಿಗೆ ಸೂಕ್ತವಲ್ಲದ ವಿಚಾರಗಳನ್ನು ಪ್ರಸಾರ ಮಾಡಬಾರದು. ಕಾನೂನು ಪ್ರಕಾರ ನಿಷೇಧಿಸಿರುವ ದೃಶ್ಯಗಳನ್ನು ಪ್ರಸಾರ ಮಾಡದಂತೆ ಸ್ವಯಂ ನಿರ್ಬಂಧ ಹೇರಿಕೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ.