ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಬಿಹಾರದ ಮುಖ್ಯಮಂತ್ರಿ ರೋಜಗಾರ್ ಯೋಜನೆಗೆ ಪ್ರಧಾನಿ ಮೋದಿ ಶುಕ್ರವಾರ ವಿಡಿಯೋ ಕಾನ್ಫ್ ರೆನ್ಸ್ ಮೂಲಕ ಚಾಲನೆ ನೀಡಿದರು. ಈ ಮೂಲಕ ಬಿಹಾರದ 75 ಲಕ್ಷ ಮಹಿಳೆಯರಿಗೆ 7,500 ಕೋಟಿ ರೂಪಾಯಿ ಅಂದರೆ ಪ್ರತಿ ಮಹಿಳೆ ಖಾತೆಗೆ 10 ಸಾವಿರ ರೂಪಾಯಿ ಹಾಕಲಾಗಿದೆ. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಮಹಿಳಾ ಮತಗಳನ್ನು ಸೆಳೆಯಲು ತಂತ್ರ ರೂಪಿಸಲಾಗಿದೆ.
ವಿಡಿಯೋ ಕಾನ್ಫ್ ರೆನ್ಸ್ ಮೂಲಕ ಚಾಲನೆ ನೀಡಿದ ಬಳಿಕ ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಪ್ರಧಾನಿ ಮೋದಿಯನ್ನು ಅಣ್ಣ ಎಂದು ಕರೆದರು. ಈ ಯೋಜನೆಯ ಹಣದಿಂದ ನಾವೆಲ್ಲ ಏನು ಮಾಡಲಿದ್ದೇವೆ ಅನ್ನೋದು ಒಬ್ಬಬ್ಬರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.