ಪ್ರಜಾಸ್ತ್ರ ಸುದ್ದಿ
ಉಡುಪಿ(Udupi): ಅಕ್ರಮವಾಗಿ ನೆಲೆಸಿದ್ದ 9 ಬಾಂಗ್ಲಾ ಪ್ರಜೆಗಳನ್ನು ಶನಿವಾರ ಮಲ್ಪೆ ಬಳಿ ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಅಕ್ರಮವಾಗಿ ನೆಲೆಸಿದ್ದವರನ್ನು ವಶಕ್ಕೆ ಪಡೆದಿದ್ದಾರೆ. ನಕಲಿ ಆಧಾರ್ ಕಾರ್ಡ್ ಸೇರಿ ಇತರೆ ದಾಖಲೆಗಳನ್ನು ಸೃಷ್ಟಿಸಿಕೊಂಡು ಇಲ್ಲಿಗೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಇಸ್ಮಾಯಿಲ್, ಕರೀಂ, ಉಸ್ಮಾನ್, ಕಾಜೋಲ್, ಹಕೀಂ ಅಲಿ, ಸಲಾಂ, ರಾಜಿಕುಲ್, ಸುಜೋನ್, ಮೊಹಮ್ಮದ್ ಸೋಜಿಬ್ ಬಂಧಿತರು. ಮೀನುಗಾರಿಕೆ ಕಾರ್ಮಿಕ ಉದ್ಯೋಗಿಗಳಾಗಿ ಇಲ್ಲಿ ಬಂದು ವಾಸವಾಗಿದ್ದರು ಅಂತಾ ಹೇಳಲಾಗುತ್ತಿದೆ. ಇತ್ತೀಚೆಗೆ ಬೆಂಗಳೂರಲ್ಲಿ ಪಾಕಿಸ್ತಾನ ಮೂಲದ ಕುಟುಂಬಸ್ಥರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.