ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಇಲ್ಲಿನ ಬಾಂದ್ರಾ ರೈಲು ನಿಲ್ದಾಣದಲ್ಲಿ(Bandra Railway Station)ಭಾನುವಾರ ಮುಂಜಾನೆ ಅಪಾರ ಪ್ರಯಾಣಿಕರಿಂದಾಗಿ ಕಾಲ್ತುಳಿತ(Stampede) ಉಂಟಾಗಿದೆ. ಇದರಿಂದಾಗಿ 9 ಜನರು ಗಾಯಗೊಂಡಿದ್ದಾರೆ. ಬಾಂದ್ರಾ ಟರ್ಮಿನಸನ್ ಪ್ಲಾಟ್ ಫಾರ್ಮ್ ನಂಬರ್ 1ರಲ್ಲಿ ಮುಂಜಾನೆ 5.56ರ ಸುಮಾರಿಗೆ ಬಾಂದ್ರಾ ಗೋರಖಪುರ್ ರೈಲು ಹತ್ತುವ ವೇಳೆ ಈ ಘಟನೆ ನಡೆದಿದೆ.
ಪರಮೇಶ್ವರ್ ಗುಪ್ತಾ, ರವೀಂದ್ರ ಚುಮಾ, ರಾಮಸೇವಕ್ ಪ್ರಜಾಪತಿ, ಇಂದ್ರಜಿತ್ ಸಹಾನಿ, ದಿವ್ಯಾಂಶು ಯಾದವ್, ನೂರ್ ಅಹಮ್ಮದ್ ಶೇಖ್, ಅಬ್ದುಲ್ ರೆಹಮಾನ್, ಶರೀಫ್ ಶೇಖ್, ಸಂಜಯ್ ಕಾಂಗೇ ಎಂಬುವರು ಗಾಯಗೊಂಡಿದ್ದಾರೆ ಎಂದು ರೈಲು ಅಧಿಕಾರಿಗಳು ತಿಳಿಸಿದ್ದಾರೆ. ಇವರನ್ನು ಭಾಭಾ ಆಸ್ಪತ್ರೆಗೆ ದಾಖಲಿಸಲಾಗಿದೆ.