ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಭಾರತೀಯ ಷೇರುಮಾರುಕಟ್ಟೆಯಲ್ಲಿ(Indian Stock Market) ನಿರಂತರವಾಗಿ ಕುಸಿತ ಕಾಣುತ್ತಿದೆ. ಹೀಗಿರುವಾಗ ಮಂಗಳವಾರ ಒಂದೇ ದಿನದಲ್ಲಿ ಹೂಡಿಕೆದಾರರ 9.19 ಲಕ್ಷ ಕೋಟಿ ರೂಪಯಿ ನಷ್ಟವಾಗಿದೆ. ಈ ಮೂಲಕ ಕರಡಿ ಕುಣಿತ ಜೋರಾಗಿ, ಎಲ್ಲರಿಗೂ ಟೆನ್ಷನ್ ನೀಡಿದೆ. 80,220,72 ಅಂಕಗಳ ಕುಸಿತದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ.
ನಿಫ್ಟಿ(Nifty) ಕೂಡ 309.00 ಅಂಕಗಳ ಕುಸಿತಗೊಂಡಿದೆ. ಮಂಗಳವಾರ ಒಂದೇ ದಿನದಲ್ಲಿ ಭಾರತೀಯ ಷೇರುಮಾರುಕಟ್ಟೆಯಲ್ಲಿ ಸೆನ್ಸೆಕ್ಸ್(Sensex) ಸೂಚ್ಯಂಕ ಬರೋಬ್ಬರಿ ಶೇಕಡ 1.15ರಷ್ಟು ಕುಸಿತ ಕಂಡಿದೆ. ನಿಫ್ಟಿ ಶೇಕಡ 1.25ರಷ್ಟು ಕುಸಿತವಾಗಿದೆ. ಇದಕ್ಕೆ ಚೀನಾ ಕಾರಣವೆಂದು ಹೇಳಲಾಗುತ್ತಿದೆ. ಚೀನಾದ ಅಗ್ಗದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಭಾರತೀಯ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರಂತೆ. ಹೂಡಿಕೆದಾರರನ್ನು ಸೆಳೆಯಲು ಚೀನಾ ಸರ್ಕಾರ ಉತ್ತೇಜಕ ಘೋಷಣೆಗಳನ್ನು ಮಾಡುತ್ತಿರುವುದು ಕಾರಣವೆಂದು ಷೇರುಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.