ಪ್ರಜಾಸ್ತ್ರ ಸುದ್ದಿ, ಸಾಂದರ್ಭಿಕ ಚಿತ್ರ
ತುಮಕೂರು(Tumakoru): 6 ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳ ಹಿಂಡೊಂದು ದಾಳಿ ನಡೆಸಿದೆ. ಇದರಿಂದಾಗಿ ಮಗು ಮೃತಪಟ್ಟ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಕಸಬಾ ಹೋಬಳಿಯ ಅಯ್ಯನಬಾವಿ ಕಾಲೋನಿ ನಿವಾಸಿ ಮಹಾಲಿಂಗಯ್ಯ ಎಂಬುವರ ಮಗಳಾದ ದಿವ್ಯ(06) ಮೃತ ದುರ್ದೈವಿ ಬಾಲಕಿಯಾಗಿದ್ದಾಳೆ.
ಮನೆ ಹತ್ತಿರ ಬಾಲಕಿ ಆಟವಾಡುತ್ತಿದ್ದಾಗ ನಾಯಿಗಳ ಗುಂಪು ಏಕಾಏಕಿ ದಾಳಿ ನಡೆಸಿವೆ. ಈ ವೇಳೆ ಸುತ್ತಮುತ್ತ ಯಾರು ಇರಲಿಲ್ಲವಂತೆ. ನಂತರ ಮಗುವಿನ ಚೀರಾಟ ಕೇಳಿ ಜನರು ಓಡಿಬರುಷ್ಟರಲ್ಲಿ ಬಾಲಕಿ ಮೇಲೆ ತೀವ್ರವಾಗಿ ನಾಯಿಗಳು ದಾಳಿ ನಡೆಸಿದ್ದವು. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಗು ಬದುಕುಳಿಯಲಿಲ್ಲವೆಂದು ತಿಳಿದು ಬಂದಿದೆ. ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಎಲ್ಲರ ಹೃದಯ ಹಿಂಡುವಂತಿದೆ.