ಪ್ರಜಾಸ್ತ್ರ ಸುದ್ದಿ
ಹಾಲಿವುಡ್ ನಟ ಸೀನ್ ಪೆನ್(64) ತಮ್ಮ 30 ವರ್ಷದ ಗೆಳತಿಯನ್ನು ಮೊರಾಕ್ಕೊದಲ್ಲಿ ನಡೆದ ಮರ್ಕೆಚ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವೆಲ್ ನಲ್ಲಿ ಪರಿಚಯಿಸಿದ್ದಾರೆ. 30 ವರ್ಷದ ನಟಿ, ಮಾಡೆಲ್ ವಲೇರಿಯಾ ನಿಕೋವ್ ಜೊತೆಗೆ ಶೀಘ್ರದಲ್ಲಿ ಮದುವೆಯಾಗುವುದಾಗಿ ಹೇಳಿದ್ದಾರೆ. ಇದು ನಟ ಸೀನ್ ಪೆನ್ ಗೆ 4ನೇ ಮದುವೆ ಎಂದು ಹೇಳಲಾಗುತ್ತಿದೆ. ಜೀವಮಾನ ಸಾಧನೆಗೆ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಗೆಳೆತಿ ಪರಿಚಯಿಸಿದ್ದಾರೆ.
70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸೀನ್ ಪೆನ್ ನಟಿಸಿದ್ದಾರೆ. ಮಿಲ್ಕ್ ಹಾಗೂ ಮಿಸ್ಟಿಕ್ ಸಿನಿಮಾಗಳಲ್ಲಿನ ನಟನೆಗಾಗಿ 2 ಬಾರಿ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ. ರಷ್ಯಾ ಮೂಲದ ನಟಿ, ಮಾಡೆಲ್ ವಲೇರಿಯಾ ನಿಕೋವ್ ಜೊತೆಗಿನ ಸಂಬಂಧದ ಹೇಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.