ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು(Chikkamagaloru): ಅಜ್ಜಿಯೊಬ್ಬರು ಕಾಲುಜಾರಿ ಬಾವಿಗೆ ಬಿದ್ದು, ಪೈಪ್ ಹಿಡಿದು ಜೀವ ಉಳಿಸಿಕೊಂಡ ಘಟನೆ ಕೊಪ್ಪ ತಾಲೂಕಿನ ಮರಕಟ್ಟೆ ಗ್ರಾಮದಲ್ಲಿ ನಡೆದಿದೆ. 94 ವರ್ಷದ ಕಮಲ ಎನ್ನುವ ವೃದ್ಧೆ ಮನೆಯ ಹತ್ತಿರದ ಬಾವಿಗೆ ಕಾಲು ಜಾರಿ ಬಿದ್ದಿದ್ದಾರೆ. ಈ ವೇಳೆ ನೀರು ಎತ್ತಲು ಬಿಟ್ಟಿದ್ದ ಪೈಪ್ ಅನ್ನು ಹಿಡಿದು ಬದುಕಿದ್ದಾರೆ. ಅವರನ್ನು ಅಗ್ನಿಶಾಮಕ ಸಿಬ್ಬಂದಿ ಬಂದು ರಕ್ಷಣೆ ಮಾಡಿದ್ದಾರೆ.
ಅಜ್ಜಿ ಬಾವಿಗೆ ಬಿದ್ದ ವಿಚಾರ ತಿಳಿದು ಜನರು ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದ್ದಾರೆ. ಅವರು ಬರುವ ತನಕ ಪೈಪ್ ಹಿಡಿದು ಬದುಕಿದ್ದಾಳೆ. ಅಜ್ಜಿಯ ಈ ಧೈರ್ಯ, ಬದುಕಿಗಾಗಿ ನಡೆಸಿದ ಹೋರಾಟ ಎಲ್ಲರಿಗೂ ಸ್ಪೂರ್ತಿ. ಅಗ್ನಿಶಾಮಕ ಸಿಬ್ಬಂದಿ ಬಂದು ರಕ್ಷಣೆ ಮಾಡಿದ್ದಾರೆ.