ಪ್ರಜಾಸ್ತ್ರ ಸುದ್ದಿ
ಹಳಿಯಾಳ(Haliyala): ಗಂಟಲಲ್ಲಿ ಬಲೂನು ಸಿಲುಕಿ 13 ವರ್ಷದ ಬಾಲಕನೊಬ್ಬ ಮೃತ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ನವೀನ್ ಬೆಳಗಾಂವರ್(13) ಮೃತ ಬಾಲಕನಾಗಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರು ನೋವು ಹೇಳ ತೀರದಾಗಿದೆ.
ಕಳೆದ ರಾತ್ರಿ ನವೀನ್ ಬಲೂನು ಊದುವ ಸಂದರ್ಭದಲ್ಲಿ ಗಂಟಕ್ಕೆ ಹೋಗಿದೆ. ಇದರಿಂದಾಗಿ ಉಸಿರು ಕಟ್ಟಿದೆ. ತಕ್ಷಣ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಅಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.