ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಆಸ್ತಿಗಾಗಿ ವಿಧವೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ಘಟನೆ ಸವದತ್ತಿ ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು, ಇದೆಲ್ಲ ಸುಳ್ಳು ಅನುಕಂಪ ಪಡೆಯುವ ಸಲುವಾಗಿ ಹೀಗೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಮಹಿಳೆ ಪತಿ 11 ವರ್ಷಗಳ ಹಿಂದೆ ತೀರಿಕೊಂಡಿದ್ದಾನೆ. ಪತಿಯ ಮೂವರು ತಿಂಗಿಯರ ಹೆಸರಿನಲ್ಲಿ ಐದು ಎಕರೆ ಹೊಲ ಇದೆ. ಅದರಲ್ಲಿ ತನ್ನ ಗಂಡನ ಪಾಲು ಬೇಕೆಂದು ಮೂರು ಬಾರಿ ಜಗಳವಾಡಿದ್ದಾಳಂತೆ. ಪ್ರಕರಣ ನ್ಯಾಯಾಲಯದಲ್ಲಿ ಇದೆ. ಅಲ್ಲಿಯೇ ಬಗೆಹರಿಸಿಕೋ ಎಂದು ಹೇಳಿದ್ದಾರಂತೆ. ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಆರೋಪ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ಮಹಿಳೆ ಮುಂದಾಗಿಲ್ಲವೆಂದು ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್ ಹೇಳಿದ್ದಾರೆ.