Ad imageAd image

ಸಕ್ಕರೆ ಕಾರ್ಖಾನೆಗೆ ವಂಚನೆ: ಇಬ್ಬರು ಆರೋಪಿಗಳಿಂದ 9 ಲಕ್ಷ ರೂಪಾಯಿ, ಕಾರು ವಶ

Nagesh Talawar
ಸಕ್ಕರೆ ಕಾರ್ಖಾನೆಗೆ ವಂಚನೆ: ಇಬ್ಬರು ಆರೋಪಿಗಳಿಂದ 9 ಲಕ್ಷ ರೂಪಾಯಿ, ಕಾರು ವಶ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮುಧೋಳ(Mudhola): ಬಾಗಲಕೋಟೆ ಜಿಲ್ಲೆಯ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆಯಿಂದ ಗುಜರಾತ್‌ನ ಅಹಮದಾಬಾದ್‌ಗೆ ಸಾಗಿಸಬೇಕಿದ್ದ ಸಕ್ಕರೆಯನ್ನು ಮಾರ್ಗ ಮಧ್ಯದಲ್ಲೇ ಮಾರಾಟ ಮಾಡಿ ವಂಚಿಸಿದ್ದ ಪ್ರಕರಣವನ್ನು ಮುಧೋಳ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಆರೋಪಿಗಳಿಂದ 9 ಲಕ್ಷ ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಲಾದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

2025ರ ನವೆಂಬರ್‌ನಲ್ಲಿ ಮಹೇಶ ಪಾಟೀಲ್‌ ಎಂಬುವವರು ನೀಡಿದ್ದ ದೂರಿನನ್ವಯ ತನಿಖೆ ನಡೆಸಿದ ವಿಶೇಷ ಪೊಲೀಸ್ ತಂಡ, ಜನವರಿ 15ರಂದು ಜೀರಗಾಳ ಬೈಪಾಸ್ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳು 50 ಕೆಜಿಯ 620 ಸಕ್ಕರೆ ಚೀಲಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದಾಗ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ವಿವಿಧೆಡೆ ಕಾನೂನುಬಾಹಿರವಾಗಿ ಮಾರಾಟ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಸಕ್ಕರೆ ಮಾರಾಟದಿಂದ ಬಂದ ಸುಮಾರು 12.50 ಲಕ್ಷ ರೂಪಾಯಿಯಲ್ಲಿ 2.50 ಲಕ್ಷ ರೂಪಾಯಿಗೆ ಕಾರೊಂದನ್ನು ಖರೀದಿಸಿರುವುದಾಗಿ ಒಪ್ಪಿಕೊಂಡಿದ್ದಾರಂತೆ.

WhatsApp Group Join Now
Telegram Group Join Now
Share This Article