ಪ್ರಜಾಸ್ತ್ರ ಸುದ್ದಿ
ಬಹರಾಂಪುರ್(Bimbadhar): ರಾಮಯಾಣ ನಾಟಕ ಮಾಡುತ್ತಿದ್ದ ಪಾತ್ರಧಾರಿಯೊಬ್ಬ ವೇದಿಕೆಯ ಮೇಲೆಯೇ ಜೀವಂತ ಹಂದಿಯನ್ನು ಕೊಂದು ತಿಂದ ಘಟನೆ ನಡೆದಿದೆ. ನವೆಂಬರ್ 24ರಂದು ಬಹರಾಂಪುರ್ ಹಿಂಜಿ ಪೊಲೀಸ್ ಠಾಣೆಯ ರಾಲಾಬ್ ಎಂಬ ಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಕ್ಷಸ ಪಾತ್ರಧಾರಿ ಭೀಮಾಂಧರ್ ಗೌಡಾ ಎಂಬಾತ ಈ ರೀತಿ ಮಾಡಿದ್ದು, ಆತನನ್ನು ಬಂಧಿಸಿದ್ದಾರೆ.
ರಾಲಾಬ್ ಹಳ್ಳಿಯಲ್ಲಿ ಕಂಜೈನಾಲ್ ಯಾತ್ರಾ ಹಿನ್ನಲೆಯಲ್ಲಿ ರಾಮಾಯಣ ನಾಟಕ ಆಯೋಜಿಸಲಾಗಿತ್ತು. ರಾಕ್ಷಸ ಪಾತ್ರಧಾರಿ ಭೀಮಾಂಧರ್ ಗೌಡಾ ಹಾಗೂ ಆತನ ಸಹಚರರು ಪ್ರೇಕ್ಷಕರ ಗಮನ ಸೆಳೆಯಲು ವೇದಿಕೆ ಮೇಲೆಯೇ ಹಂದಿಯನ್ನು ಕೊಂದು ಹೊಟ್ಟೆಯನ್ನು ಸೀಳಿ ಹಸಿ ಮಾಂಸ ತಿಂದ ಘಟನೆ ನಡೆದಿದೆ. ಇಡೀ ಘಟನೆಯನ್ನು ಎಲ್ಲ ರಾಜಕೀಯ ಪಕ್ಷಗಳು ಖಂಡಿಸಿವೆ.