Ad imageAd image

ಸಂಜು ಆರ್ಭಟಕ್ಕೆ ಬೆಂಡಾದ ಬಾಂಗ್ಲಾ.. ಸರಣಿ ಕ್ಲೀನ್ ಸ್ವಿಪ್

ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಭಾರತ ಹಾಗೂ ಬಾಂಗ್ಲಾ ನಡುವಿನ 3ನೇ ಹಾಗೂ ಕೊನೆಯ ಟಿ-20 ಪಂದ್ಯದಲ್ಲಿ

Nagesh Talawar
ಸಂಜು ಆರ್ಭಟಕ್ಕೆ ಬೆಂಡಾದ ಬಾಂಗ್ಲಾ.. ಸರಣಿ ಕ್ಲೀನ್ ಸ್ವಿಪ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹೈದರಾಬಾದ್(Hyderabad): ಇಲ್ಲಿನ ರಾಜೀವ್ ಗಾಂಧಿ(Rajiv Gandhi International Stadium) ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಭಾರತ ಹಾಗೂ ಬಾಂಗ್ಲಾ ನಡುವಿನ 3ನೇ ಹಾಗೂ ಕೊನೆಯ ಟಿ-20 ಪಂದ್ಯದಲ್ಲಿ 133 ರನ್ ಗಳ ದೊಡ್ಡ ಅಂತರದಿಂದ ಭಾರತ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವಿಪ್ ಮಾಡಿಕೊಂಡಿದೆ. ಟೀಮ ಇಂಡಿಯಾ ನೀಡಿದ್ದ 298 ರನ್ ಗಳ ದೊಡ್ಡ ಗುರಿಯನ್ನು ಬಾಂಗ್ಲಾದೇಶದ ಆಟಗಾರರು ಮುಟ್ಟಲು ಆಗದೆ 7 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ ಸೋಲು ಕಂಡರು.

ಆಭರ್ಟಿಸಿದ ಸಂಜು ಸ್ಯಾಮ್ಸನ್:

ಟೀಂ ಇಂಡಿಯಾದ ಯುವ ಆಟಗಾರ ಸಂಜು ಸ್ಯಾಮ್ಸನ್(Sanju Samson) ಆರ್ಭಟಕ್ಕೆ ಬಾಂಗ್ಲಾ ಬೌಲರ್ ಗಳು ಬೆವತು ಹೋದರು. 3ನೇ ಓವರ್ ನಲ್ಲಿ ಅಭಿಷೇಕ್ ಶರ್ಮಾ ಕೇವಲ 4 ರನ್ ಗಳಿಗೆ ಔಟ್ ಆದ. ಹೀಗಾಗಿ ಭಾರೀ ಸಂಭ್ರಮದಲ್ಲಿ ಎದುರಾಳಿ ತಂಡ ಮುಳುಗಿತ್ತು. ಆದರೆ, ಇವರ ಸಂಭ್ರಮಕ್ಕೆ ಸಂಜು ಸ್ಯಾಮ್ಸನ್ ದೊಡ್ಡ ಹೊಡೆತ ಕೊಟ್ಟ. ಸಿಕ್ಸ್, ಫೋರ್ ಗಳನ್ನು ಬಾರಿಸುವ ಮೂಲಕ ಬೌಲರ್ ಗಳನ್ನು ಕಾಡಿದ. ಇವನಿಗೆ ನಾಯಕ ಸೂರ್ಯಕುಮಾರ್ ಯಾದವ್ ಸಾಥ್ ನೀಡಿ ರನ್ ಹೊಳೆ ಹರಿಸಿದರು. 47 ಎಸೆತಗಳಲ್ಲಿ 8 ಸಿಕ್ಸ್, 11 ಫೋರ್ ಗಳೊಂದಿಗೆ 111 ರನ್ ಗಳಿಸಿದ ಸಂಜು ಸ್ಯಾಮ್ಸನ್ ಟಿ-20ನಲ್ಲಿ ಭಾರತ ಪರ ಅತಿ ವೇಗವಾಗಿ ಶತಕ ಗಳಿಸಿದ 2ನೇ ಆಟಗಾರರನಾದ. 35 ಎಸೆತಗಳಲ್ಲಿ ರೋಹಿತ್ ಶರ್ಮಾ ಶತಕ ಬಾರಿಸಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್ 35 ಎಸೆತಗಳಲ್ಲಿ 5 ಸಿಕ್ಸ್, 8 ಫೋರ್ ಗಳೊಂದಿಗೆ 75 ರನ್ ಗಳಿಸಿದ. ಹೀಗಾಗಿ 3ನೇ ವಿಕೆಟ್ ಗೆ ಈ ಜೋಡಿ 206 ರನ್ ಭಾರಿಸಿತು.

ಮುಂದೆ ಪರಾಗ್ 4 ಸಿಕ್ಸ್, 1 ಫೋರ್ ನೊಂದಿಗೆ 13 ಎಸೆತಗಳಲ್ಲಿ 34 ರನ್, ಪಾಂಡ್ಯ 4 ಸಿಕ್ಸ್, 4 ಫೋರ್ ಗಳೊಂದಿಗೆ 18 ಎಸೆತಗಳಲ್ಲಿ 47 ರನ್ ಗಳಿಸಿ 300ರ ಗಡಿಗೆ ಬರುವಂತೆ ಮಾಡಿದರು. ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿತು. ಇದರೊಂದಿಗೆ ಟಿ-20 ಪಂದ್ಯಗಳಲ್ಲಿ ಅತ್ಯಧಿಕ ರನ್ ಗಳಿಸಿ ತಂಡ ಭಾರತವಾಯಿತು. ಐರ್ಲೆಂಡ್ ವಿರುದ್ಧ ಅಫ್ಘನ್ 278 ರನ್ ಗಳಿಸಿದ್ದು ಗರಿಷ್ಠವಾಗಿತ್ತು. ಶ್ರೀಲಂಕಾ ವಿರುದ್ಧ ಭಾರತ 260 ರನ್ ಗಳಿಸಿತ್ತು. ಈಗ ಆ ಎಲ್ಲ ದಾಖಲೆ ಉಡೀಸ್ ಆದವು. ಬಾಂಗ್ಲಾ ಪರ ತಂಜಿಮ್ ಹಸನ್ ಶಕೀಬ್ 3 ವಿಕೆಟ್ ಪಡೆದು ಮಿಂಚಿದ. ತಸ್ಕಿನ್, ಮಹಮುದ್ದಲಾ, ರೆಹಮಾನ್ ತಲಾ 1 ವಿಕೆಟ್ ಪಡೆದರು.

ಇಷ್ಟು ದೊಡ್ಡ ಸ್ಕೋರ್ ಚೇಸ್ ಮಾಡಿದ ಬಾಂಗ್ಲಾ ಪಡೆಯಲ್ಲಿ ಟುವಿದ್ ಹರ್ದ್ಯ 63 ರನ್, ಲಿಟನ್ ದಾಸ್ 42 ರನ್ ಬಿಟ್ಟರೆ ಉಳಿದವರು ಕ್ರಿಸ್ ನಲ್ಲಿ ನಿಲ್ಲಲು ಆಗದೆ ಪೆವಿಲಿಯನ್ ಪರೇಡ್ ನಡೆಸಿದರು. ಹೀಗಾಗಿ 7 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಭಾರತ ರವಿ ಬಿಷ್ಟೋಯಿ 3 ವಿಕೆಟ್ ಪಡೆದು ಸಂಭ್ರಮಿಸಿದ. ಮಯಾಂಕ್ ಯಾದವ್ 2, ವಾಸಿಂಗ್ಟನ್ ಸುಂದರ್, ನಿತಿಶ್ ಕುಮಾರ್ ರೆಡ್ಡಿ ತಲಾ 1 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ ಪ್ಲೇಯರ್ ಆಫ್ ದಿ ಸೀರಿಸ್, ಸಂಜು ಸ್ಯಾಮ್ಸನ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.

WhatsApp Group Join Now
Telegram Group Join Now
Share This Article