ಪ್ರಜಾಸ್ತ್ರ ಸುದ್ದಿ
ಜೈಪುರ(Jaipur): ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಚಿಕಿತ್ಸಗೆ ದಾಖಲಾಗಿದ್ದ 10 ವರ್ಷದ ಬಾಲಕನಿಗೆ ಇಲಿ ಕಡಿದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಸರ್ಕಾರಿ ಆಸ್ಪತ್ರೆಯ ವೈದ್ಯರು ಇಲಿ ಕಡಿತದಿಂದ ಬಾಲಕ ಮೃತಪಟ್ಟಿಲ್ಲ ಎಂದಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆಗೆ ರಾಜಸ್ಥಾನ ಸರ್ಕಾರ ಸಮಿತಿ ರಚಿಸಿದೆ.
ಡಿಸೆಂಬರ್ 11ರಂದು ಬಾಲಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕೆಲ ಹೊತ್ತಿನ ನಂತರ ಅಳಲು ಪ್ರಾರಂಭಿಸಿದ್ದಾನೆ. ಕುಟುಂಬಸ್ಥರು ಹೊಚ್ಚಿದ ಹೊದಿಕೆ ತೆಗೆದಿದ್ದಾರೆ. ಆಗ ಕಾಲಬೆರಳಿನಿಂದ ರಕ್ತ ಸೋರುತ್ತಿರುವುದು ಕಂಡು ಬಂದಿದೆ. ಕೂಡಲೇ ನರ್ಸ್ ಪ್ರಥಮ ಚಿಕಿತ್ಸೆ ನೀಡಿ ಬ್ಯಾಂಡೇಜ್ ಸುತ್ತಿದ್ದಾರೆ. ಜ್ವರ ಹಾಗೂ ನ್ಯುಮೋನಿಯಾ ಮತ್ತು ಅತಿಯಾದ ಸೋಂಕು ಸೆಪ್ಟಿಸೆಮಿಯಾದಿಂದ ಶುಕ್ರವಾರ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ಡಾ.ಸಂದೀಪ್ ಜಸುಜಾ ಹೇಳಿದ್ದಾರೆ.