ಪ್ರಜಾಸ್ತ್ರ ಸುದ್ದಿ
ಮಡಿಕೇರಿ(Madikeri): ಉದ್ಯಮದಲ್ಲಿ ನಷ್ಟ, ಸಾಲಗಾರರ ಕಿರುಕುಳದಿಂದ ಉದ್ಯಮಿಯೊಬ್ಬರು ಪತ್ನಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಿಯಾಪಟ್ಟಣ ತಾಲೂಕಿನ ದೊಡ್ಡಹೊನ್ನೂರು ಕಾವಲ್ ನಲ್ಲಿರುವ ಜಮೀನುವೊಂದರಲ್ಲಿನ ಖಾಲಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೊಪ್ಪ ನಿವಾಸಿ ಸುರೇಶ್(40) ಹಾಗೂ ಪತ್ನಿ ಪಲ್ಲವಿ(28) ಆತ್ಮಹತ್ಯೆ ಮಾಡಿಕೊಂಡ ದಂಪತಿಯಾಗಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ನಡೆಸುತ್ತಿದ್ದ ಸುರೇಶ್ ಇದರಲ್ಲಿ ನಷ್ಟ ಅನುಭವಿಸಿದ್ದರಂತೆ. ಹೀಗಾಗಿ ಸಾಲ ಹೆಚ್ಚಾಗಿದೆ. ಅದನ್ನು ತೀರಿಸಲು ಆಗದೆ ಹಾಗೂ ಸಾಲಗಾರರ ಕಿರುಕುಳದಿಂದ ಈ ರೀತಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ ಕೆಲವರು ಹೆಸರು ಬರೆದಿದ್ದಾರಂತೆ. ಬೈಲುಕೊಪ್ಪ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ತನಿಖೆಯಿಂದ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಲಿದೆ.