ಪ್ರಜಾಸ್ತ್ರ ಸುದ್ದಿ
ಕ್ವಾಲಾಲಂಪುರ(Kuala Lumpur): ಚಲಿಸುತ್ತಿದ್ದ ರೈಲಿನ ಮೇಲೆ ಕ್ರೇನ್ ಉರುಳಿ ಬಿದ್ದ ಪರಿಣಾಮ 12 ಜನರು ಮೃತಪಟ್ಟಿದ್ದು, 30 ಜನರು ಗಾಯಗೊಂಡಿರುವ ಘಟನೆ ಥಾಯ್ಲೆಂಡ್ ನಲ್ಲಿ ನಡೆದಿದೆ. ನಖೋನ್ ರಚ್ಚಾಸಿಮಾ ಪ್ರಾಂತ್ಯದ ಸಿಖಿಯೊ ಜಿಲ್ಲೆಯಲ್ಲಿ ಈ ಅಪಘಾತ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ ಬ್ಯಾಂಕಕ್ ನಿಂದ ರೈಲು ಹೊರಟಿತ್ತು. ಹೈಸ್ಪೀಡ್ ರೈಲು ಯೋಜನೆಯ ಕಾಮಗಾರಿ ನಡೆಯುತ್ತಿದ್ದ ವೇಳೆ ಕ್ರೇನ್ ರೈಲಿನ ಮೇಲೆ ಬಿದ್ದಿದೆ. ರೈಲಿನ ಕೆಲ ಬೋಗಿಗಳು ಹಳಿ ತಪ್ಪಿವೆ. ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ದುರಂತದಲ್ಲಿ 12 ಜನರು ಪ್ರಾಣ ಕಳೆದುಕೊಂಡಿದ್ದಾರೆ.




