ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಸರಣಿ ಅತ್ಯಾಚಾರ ಪ್ರಕರಣದ(Serial Rapist) ಅಪರಾಧಿ ಪೆರೋಲ್ ಮೇಲೆ ಹೊರಗೆ ಬಂದ ಸಂದರ್ಭದಲ್ಲಿ ಮತ್ತೆ ತನ್ನ ನೀಚ ಕೃತ್ಯವೆಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಸ್ವತಃ 11 ವರ್ಷದ ಅಪ್ರಾಪ್ತೆ ಮಗಳು ಹಾಗೂ 14 ವರ್ಷದ ಅಪ್ರಾಪ್ತೆ ಸಹೋದರ ಸೊಸೆ ಮೇಲೆಯೂ ಅತ್ಯಾಚಾರವೆಸಗಿದ್ದಾನೆ ಎಂದು ವರದಿಯಾಗಿದೆ. ಇಂತಹ ವಿಕೃತ ಹೀನ ಕೃತ್ಯ ಛತ್ತೀಸಗಢದ(Chhattisgarh) ಕೊರಿಯ ಜಿಲ್ಲೆಯಲ್ಲಿ ನಡೆದಿದೆ.
ಅಕ್ಟೋಬರ್ 19ರಂದು ಮಗಳ ಮೇಲೆ ಅಕ್ಟೋಬರ್ 21ರಂದು ಸಹೋದರ ಸೊಸೆಯ ಮೇಲೆ ಅತ್ಯಾಚಾರವೆಸಗಿದ್ದಾನಂತೆ. ಈ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತರು ತಿಳಿಸಿದ್ದಾರೆ ಎಂದು ಪೊಲೀಸರು(Police) ಹೇಳುತ್ತಿದ್ದಾರೆ.