ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜಧಾನಿಯಲ್ಲಿ ವಾಸವಾಗಿದ್ದ ಪಾಕಿಸ್ತಾನ ಮೂಲದ ಕುಟುಂಬ ಹಾಗೂ ಮೂವರು ವಿದೇಶಿ(France) ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಿಗಣಿ ಹತ್ತಿರ ಅಪಾರ್ಟ್ ಮೆಂಟ್ ವೊಂದರಲ್ಲಿ ಪಾಕಿಸ್ತಾನ ಮೂಲದ ವ್ಯಕ್ತಿ ಬಾಂಗ್ಲಾ ಮೂಲದ ಮಹಿಳೆಯೊಂದಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳೊಂದಿಗೆ ಬೆಂಗಳೂರಲ್ಲಿ ವಾಸವಾಗಿದ್ದ. ಇವರೊಂದಿಗೆ ಮೂವರು ವಿದೇಶಿಗರನ್ನು ವಶಕ್ಕೆ ಪಡೆಯಲಾಗಿದೆ.
ಗುಪ್ತಚರ ಮಾಹಿತಿ ಮೇರೆಗೆ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಕ್(Pakistan)ಮೂಲದ ರಶೀದಿ ಅಲಿ ಸಿದ್ದಿಕಿ ಆರ್ಥಿಕ ಸಮಸ್ಯೆ ಹಾಗೂ ಗಲಭೆಯಿಂದಾಗಿ ಬಾಂಗ್ಲಾಕ್ಕೆ(Bangladesh)ಹೋಗಿದ್ದ. ಢಾಕಾದಲ್ಲಿ ಯುವತಿಯೊಬ್ಬಳನ್ನು ಮದುವೆಯಾಗಿದ್ದಾನೆ. ಮುಂದೆ 2014ರಲ್ಲಿ ಪತ್ನಿಯೊಂದಿಗೆ ಅಕ್ರಮವಾಗಿ ದೆಹಲಿಗೆ ಬಂದಿದ್ದಾನೆ. ಅಲ್ಲಿ ವ್ಯಕ್ತಿಯೊಬ್ಬನ ಸಹಾಯದಿಂದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪಾಸ್ ಪೋರ್ಟ್ ನ್ನು ಶಂಕರ್ ಶರ್ಮಾ ಹೆಸರಿನಲ್ಲಿ ಮಾಡಿಸಿಕೊಂಡಿದ್ದಾನೆ. 2018ರಲ್ಲಿ ಬೆಂಗಳೂರಿಗೆ ಬಂದು ಜಿಗಣಿ ಹತ್ತಿರದ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದ. ಕೇಂದ್ರ ಗುಪ್ತಚರ ದಳದ ಮಾಹಿತಿಯಿಂದ ಸಿಕ್ಕಿಬಿದ್ದಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ.