Ad imageAd image

ಬಾಗಲಕೋಟೆ: ಮದುವೆಯಾದ ಕೆಲ ಕ್ಷಣಗಳಲ್ಲೇ ವರ ಸಾವು

Nagesh Talawar
ಬಾಗಲಕೋಟೆ: ಮದುವೆಯಾದ ಕೆಲ ಕ್ಷಣಗಳಲ್ಲೇ ವರ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ(Bagalakote): ಮದುವೆಯಾದ ಕೆಲ ಕ್ಷಣಗಳಲ್ಲೇ ವರ ಕುಸಿದು ಬಿದ್ದು ಮೃತಪಟ್ಟ ಘಟನೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ನಡೆದಿದೆ. ಪ್ರವೀನ್ ಕುರ್ನೆ ಮೃತ ದುರ್ದೈವಿ ವರನಾಗಿದ್ದಾನೆ. ಪಟ್ಟಣದ ನಂದಿಕೇಶ್ವರ ದೇವಸ್ಥಾನದಲ್ಲಿ ಇಂದು ಮದುವೆ ನಡೆದಿದೆ. ಆದರೆ, ಕೆಲ ಕ್ಷಣಗಳಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಎಲ್ಲರ ಕಣ್ಣಗಳು ತೇವಗೊಂಡಿವೆ. ಕಲ್ಯಾಣ ಮಂಟಪದಲ್ಲಿಯೇ ವರ ಪ್ರವೀಣ ಕುರ್ನೆ ಕುಸಿದು ಬಿದ್ದು ಮೃತಪಟ್ಟಿದ್ದು, ಎಲ್ಲೆಲ್ಲೂ ದುಃಖ ಮುಗಿಲು ಮುಟ್ಟಿದೆ.

ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ಪ್ರವೀಣ ಕುರ್ನೆ ಹಾಗೂ ಪೂಜಾ ಎಂಬುವರ ನಡುವೆ ವಿವಾಹವನ್ನು ಪಟ್ಟಣದ ನಂದಿಕೇಶ್ವರ ದೇವಸ್ಥಾನದಲ್ಲಿ ನಡೆಸಲಾಗಿದೆ. ಸಡಗರ, ಸಂಭ್ರಮದಲ್ಲಿ ಮುಳುಗಿ ಹೋಗಬೇಕಿದ್ದ ಮನೆಯಲ್ಲಿ ಸೂತಕ ಛಾಯೆ ಆವರಿಸಿಕೊಂಡಿದೆ. ಇಡೀ ಗ್ರಾಮದಲ್ಲಿಯೂ ನೀರವ ಮೌನ ಆವರಿಸಿಕೊಂಡಿದೆ. ಮದುವೆಗೆ ಬಂದವರು ಸೇರಿದಂತೆ ಎಲ್ಲರು ಇಡೀ ಮನಕಲಕುವ ಘಟನೆ ಕಂಡು ಕಣ್ಣೀರು ಹಾಕಿದ್ದಾರೆ.

WhatsApp Group Join Now
Telegram Group Join Now
Share This Article