ಪ್ರಜಾಸ್ತ್ರ ಸುದ್ದಿ
ಅಹಮದಾಬಾದ್(Ahmedabad): ಚಲಿಸುತ್ತಿದ್ದ ಆಂಬ್ಯುಲೆನ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನವಜಾತ ಶಿಶು ಸೇರಿ ನಾಲ್ವರು ಮೃತಪಟ್ಟ ದಾರುಣ ಘಟನೆ ಗುಜರಾತಿನ ಅರವಲ್ಲಿ ಜಿಲ್ಲೆಯ ಮೊಡಾಸಾ ನಗರದಲ್ಲಿ ನಡೆದಿದೆ. ನವಜಾತ ಶಿಶುವಿನ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಅಹಮದಾಬಾದ್ ನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಆಂಬ್ಯುಲೆನ್ಸ್ ನಲ್ಲಿದ್ದ ಶಿಶು, ತಂದೆ ಜಿಗ್ನೇಶ್ ಮೋಚಿ(38), ಡಾ.ಶಾಂತಿಲಾಲ್ ರೆಂತಿಯಾ(30), ನರ್ಸ್ ಭುರಿಬೆನ್ ಮನತ್(23) ಮೃತ ದುರ್ದೈವಿಗಳು. ಚಾಲಕ ಸೇರಿ ಇನ್ನಿಬ್ಬರು ಗಾಯಗೊಂಡಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲು ವಿಧಿ ವಿಜ್ಞಾನ ತಜ್ಞರು ಕರೆಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.




