ಪ್ರಜಾಸ್ತ್ರ ಸುದ್ದಿ
ರಾಮನಗರ(Ramanagara): ಮೈಸೂರು-ಉದಯಪುರ ಮಧ್ಯ ಸಂಚರಿಸುವ ಪ್ಯಾಲೇಸ್ ಕ್ವೀನ್ ಹಮ್ ಸಫರ್ ಎಕ್ಸ್ ಪ್ರೆಸ್ ರೈಲಿನ ಎಂಜಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಹತ್ತಿರ ಗುರುವಾರ ಮುಂಜಾನೆ 11.45ರ ಸುಮಾರಿಗೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ನಡೆದಿಲ್ಲ.
ಬೆಂಕಿ ಗಮನಿಸಿದ ಲೋಕೊಪೈಲಟ್ ಕೂಡಲೇ ಕಂಟ್ರೋಲ್ ರೂಮಿಗೆ ಮಾಹಿತಿ ನೀಡಿದರು. ಕೂಡಲೇ ರೈಲು ನಿಲ್ಲಿಸಲಾಯಿತು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು. ಈ ಘಟನೆಯಿಂದ ಕೆಲ ರೈಲುಗಳ ಸಂಚಾರ ಒಂದಿಷ್ಟು ಸಮಸ್ಯೆಯಾಯಿತು. ರೈಲಿಗೆ ಬೇರೆ ಎಂಜಿನ್ ಜೋಡಣೆ ಮಾಡಿದ ಬಳಿಕ ಸಂಚಾರ ಪ್ರಾರಂಭಿಸಿತು.