Ad imageAd image

ತಾಯ್ನಾಡಿಗೆ ಬಂದ ವಿನೀಶಾಗೆ ಭವ್ಯ ಸ್ವಾಗತ

ಪ್ಯಾರಿಸ್ ಒಲಿಂಪಿಕ್ಸ್-2024 ಕ್ರೀಡಾಕೂಟದಲ್ಲಿ 50 ಕೆಜಿ ಮಹಿಳಾ ವಿಭಾಗದ ಕುಸ್ತಿಯಲ್ಲಿ ಫ್ಯಾನಲ್ ತಲುಪಿದ ಮೊದಲ ಭಾರತೀಯ ಕ್ರೀಡಾಪಟು ವಿನೀಶಾ ಫೋಗೆಟ್ ಇಂದು ತಾಯ್ನಾಡಿಗೆ ಬಂದಿಳಿದರು.

Nagesh Talawar
ತಾಯ್ನಾಡಿಗೆ ಬಂದ ವಿನೀಶಾಗೆ ಭವ್ಯ ಸ್ವಾಗತ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಪ್ಯಾರಿಸ್ ಒಲಿಂಪಿಕ್ಸ್-2024 ಕ್ರೀಡಾಕೂಟದಲ್ಲಿ 50 ಕೆಜಿ ಮಹಿಳಾ ವಿಭಾಗದ ಕುಸ್ತಿಯಲ್ಲಿ ಫ್ಯಾನಲ್ ತಲುಪಿದ ಮೊದಲ ಭಾರತೀಯ ಕ್ರೀಡಾಪಟು ವಿನೀಶಾ(Vinesh phogat) ಫೋಗೆಟ್ ಇಂದು ತಾಯ್ನಾಡಿಗೆ ಬಂದಿಳಿದರು. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಕೇಲವ 100 ಗ್ರಾಂ ತೂಕ ಹೆಚ್ಚಳದಿಂದ ಅನರ್ಹಗೊಂಡ ಪರಿಣಾಮ ಕನಿಷ್ಠ ಬರಬೇಕಿದ್ದ ಬೆಳ್ಳಿ ಪದಕವೂ ಬರಲಿಲ್ಲ. ಆದರೆ, ಅವರ ಸಾಧನೆಗೆ ಇಡೀ ದೇಶವೇ ತಲೆಬಾಗಿದೆ. ಹೀಗಾಗಿಯೇ ಇಂದು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದೆ.

ವಿಮಾನ ನಿಲ್ದಾಣದ ಎದುರು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ವಿನೀಶಾ ಪರವಾಗಿ ಜೈಕಾರ ಕೂಗಲಾಯಿತು. ಈ ಪ್ರೀತಿ, ಅಭಿಮಾನ ಕಂಡು ಭಾವುಕರಾದ ಅವರು, ಇಷ್ಟೊಂದು ಪ್ರೀತಿ, ಗೌರವ ಸಿಕ್ಕಿರುವುದಕ್ಕೆ ನಾನು ಅದೃಷ್ಟವಂತೆ. ಎಲ್ಲರಿಗೂ ಧನ್ಯವಾದಗಳು ಎಂದರು. ವಿನೀಶಾಗೆ ಸಾಥ್ ನೀಡಿದ ಟೊಕಿಯೊ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ಚಾಂಪಿಯನ್ ರೀತಿ ಸ್ವಾಗತ ಮಾಡ್ತಿರುವುದು ಖುಷಿ ತಂದಿದೆ. ಬೀದಿಯ ಹೋರಾಟದಿಂದ ವೇದಿಕೆಯತ್ತ ನಡೆದ ವಿನೀಶಾ ಪಯಣವನ್ನು ದೇಶದ ಜನತೆ ಗಮನಿಸಿದೆ. ದೇಶ ಹಾಗೂ ಮಹಿಳೆಯರಿಗಾಗಿ ಮಾಡಿದ ಸಾಧನೆ ಇದು. ಎಲ್ಲರಿಗೂ ಧನ್ಯವಾದಗಳೆಂದು ಈ ಇಬ್ಬರು ಕುಸ್ತಿಪಟುಗಳು ಹೇಳಿದರು.

WhatsApp Group Join Now
Telegram Group Join Now
TAGGED:
Share This Article