ಪ್ರಜಾಸ್ತ್ರ ಸುದ್ದಿ
ಕೊಪ್ಪಳ(Koppala): ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಬರುವ ಅಂಜನಾದ್ರಿ ಬೆಟ್ಟದಲ್ಲಿ ಶನಿವಾರ ಭಕ್ತರ ದಂಡು ಸೇರಿದೆ. ಹನುಮ ಜಯಂತಿ ಹಿನ್ನಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು, ರಾಮ ಭಂಟನ ದರ್ಶನ ಪಡೆಯುತ್ತಿದ್ದಾರೆ. ಇಂದು ಎರಡನೇ ಶನಿವಾರ ಸರ್ಕಾರಿ ರಜೆ, ಭಾನುವಾರ ಹಾಗೂ ಸೋಮವಾರ ಅಂಬೇಡ್ಕರ್ ಜಯಂತಿ ರಜೆ ಇರುವುದರಿಂದ ಪ್ರವಾಸಿಗರ ಸಂಖ್ಯೆ ಅಪಾರವಾಗಿದೆ.
ನಾಡಿನ ಬೇರೆ ಬೇರೆ ಭಾಗದ ಭಕ್ತರು, ಹೊರ ರಾಜ್ಯದ ಭಕ್ತರು ಸಹ ಭೇಟಿ ನೀಡಿದ್ದು, ಆಂಜನೇಯನ ದರ್ಶನ ಪಡೆದು ಸಂಭ್ರಮಿಸುತ್ತಿದ್ದಾರೆ. ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಂಕೈರ್ಯಗಳು ನಡೆಯುತ್ತಿವೆ. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.