ಪ್ರಜಾಸ್ತ್ರ ಸುದ್ದಿ
ದೇವರ ಹಿಪ್ಪರಗಿ(Devara Hipparagi): ಆಟೋಗೆ ರಾಶಿ ಮಾಡುವ ಬೃಹತ್ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ಪಟ್ಟಣದ ಮೊಹರೆ ವೃತ್ತದ ಬಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಡಿಕ್ಕಿಯಾದ ರಭಸಕ್ಕೆ ಆಟೋ ಹಿಂಭಾಗ ಸಂಪೂರ್ಣ ಹಾನಿಯಾಗಿದೆ. ಆಟೋದಲ್ಲಿ ಮಹಿಳೆ ಹಾಗೂ ಮಕ್ಕಳಿಬ್ಬರು ಇದ್ದರು ಎಂದು ಆಟೋ ಚಾಲಕ ಅಬ್ದುಲ್ ರಜೀದ್ ಹೇಳಿದ್ದಾರೆ.
ಪ್ರಯಾಣಿಕರನ್ನು ಆಟೋದಲ್ಲಿ ಕರೆದುಕೊಂಡು ಬಂದು ಮೊಹರೆ ವೃತ್ತದ ಬಳಿ ಇಳಿಸುವ ಸಲುವಾಗಿ ಆಟೋ ನಿಧಾನ ಮಾಡಿದಾಗ ತೊಗರಿ ರಾಶಿ ಮಾಡುವ ಬೃಹತ್ ವಾಹನ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದ್ದಾನೆ. ಯಾರಿಗೂ ಏನೂ ಆಗಿಲ್ಲ. ಆಟೋಗೆ ಹಾನಿಯಾಗಿದೆ ಎಂದು ಚಾಲಕ ತಿಳಿಸಿದ್ದಾನೆ. ದೇವರ ಹಿಪ್ಪರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




