Ad imageAd image

ಸಿಲಿಕಾನ್ ಸಿಟಿಯಲ್ಲಿ ಪತ್ನಿ ಕೊಲೆಗೈದ ಪತಿ

Nagesh Talawar
ಸಿಲಿಕಾನ್ ಸಿಟಿಯಲ್ಲಿ ಪತ್ನಿ ಕೊಲೆಗೈದ ಪತಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಪತಿ ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಕಳೆದ ರಾತ್ರಿ ಈ ಒಂದು ಘಟನೆ ನಡೆದಿದೆ. ದೇವಿಕಾ(50) ಕೊಲೆಯಾದ ದುರ್ದೈವಿಯಾಗಿದ್ದಾರೆ. ಕುಮಾರ್ ಕೊಲೆ ಮಾಡಿದ ಆರೋಪಿ ಪತಿಯಾಗಿದ್ದಾನೆ. ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ.

ಇತ್ತೀಚೆಗೆ ಇವರ ಕುಟುಂಬ ಕೇರಳ ಪ್ರವಾಸಕ್ಕೆ ಹೋಗಿತ್ತಂತೆ. ಪತ್ನಿ ದೇವಿಕಾ ಚಾಲಕನ ಜೊತೆಗೆ ಮಾತನಾಡಿದ್ದಕ್ಕೆ ಅನುಮಾನಗೊಂಡಿದ್ದಾನಂತೆ. ಇದರಿಂದ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಇದಿಷ್ಟೆ ವಿಚಾರಕ್ಕೆ ಇಂತಹದೊಂದು ಕೃತ್ಯವೆಸಗಲಾಗಿದೆಯಾ ಅಥವ ಬೇರೆ ಇನ್ನೇನಾದರೂ ಕಾರಣವಿರಬಹುದಾ ಅನ್ನೋ ಅನುಮಾನ ಮೂಡಿದೆ. ಇನ್ನು ಆರೋಪಿ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದು ಮಕ್ಕಳು ತಡೆದಿದ್ದಾರಂತೆ. ಪೊಲೀಸರು ಇತನನ್ನು ಬಂಧಿಸಿದ್ದಾರೆ.

WhatsApp Group Join Now
Telegram Group Join Now
Share This Article