Ad imageAd image

ನೆಲಬಾಂಬ್ ಸ್ಫೋಟ: ಓರ್ವ ಯೋಧ ಹುತಾತ್ಮ, ಇಬ್ಬರಿಗೆ ಗಾಯ

Nagesh Talawar
ನೆಲಬಾಂಬ್ ಸ್ಫೋಟ: ಓರ್ವ ಯೋಧ ಹುತಾತ್ಮ, ಇಬ್ಬರಿಗೆ ಗಾಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಶ್ರೀನಗರ(Srinagara): ನೆಲಬಾಂಬ್ ಸ್ಫೋಟದಿಂದಾಗಿ ಓರ್ವ ಯೋಧ ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಹತ್ತಿರ ನಡೆದಿದೆ. ಕೃಷ್ಣ ಘಾಟಿ ಬಳಿ ಗಸ್ತು ತಿರುಗುತ್ತಿದ್ದಾಗ ನೆಲಬಾಂಬ್ ಸ್ಫೋಟಗೊಂಡಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

7 ಜೆಎಟಿ ರೆಜಿಮೆಂಟ್ ನ ಅಗ್ನಿವೀರ್ ಲಲಿತ್ ಕುಮಾರ್ ಹುತಾತ್ಮರಾಗಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರು ಜೆಸಿಒ ಆಗಿದ್ದು, ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಡಿದ ಯೋಧನಿಗೆ ಸೇನೆ ಶ್ರದ್ಧಾಂಜಲಿ ಸಲ್ಲಿಸಿದೆ.

WhatsApp Group Join Now
Telegram Group Join Now
Share This Article